ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪರ ಆಡಿದ್ದು ಕೇವಲ 4 ಎಸ್‌ಸಿ/ಎಸ್‌ಟಿ ಆಟಗಾರರು ದಿ ವೈರ್ ವರದಿಗೆ ಕೈಫ್ ಟೀಕೆ!

ಮುಂಬೈ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಒಡೆತನದ ಸಂಸ್ಥೆಯ ಆದಾಯ ಹದಿನಾರು ಸಾವಿರ ಪಟ್ಟು ಹೆಚ್ಚಾಗಿದೆ ಎಂದು ವರದಿ ಮಾಡಿದ್ದ ದಿ ವೈರ್ ಇದೀಗ ಕ್ರಿಕೆಟ್ ನಲ್ಲಿ ಎಸ್‌ಸಿ/ಎಸ್‌ಟಿ ಆಟಗಾರರ ಕೊರತೆ ಸಂಬಂಧ ವರದಿ ಮಾಡಿದೆ.
86 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಟೀಂ ಇಂಡಿಯಾದಲ್ಲಿ ಕೇವಲ 4 ಮಂದಿ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದ ಆಟಗಾರರು ಮಾತ್ರ ಆಡಿದ್ದಾರೆ ಎಂದು ದಿ ವೈರ್ ವರದಿ ಮಾಡಿದ್ದು ಇದಕ್ಕೆ ಟೀಂ ಇಂಡಿಯಾದ ಕ್ರಿಕೆಟಿಗ ಮೊಹಮ್ಮದ್ ಕೈಫ್ ಕಟುವಾಗಿ ಟೀಕಿಸಿದ್ದಾರೆ.
ಸುದ್ದಿ ಪೋರ್ಟಲ್ ದಿ ವೈರ್ ಟೆಸ್ಟ್ ಕ್ರಿಕೆಟ್ ನಲ್ಲಿ ಸುಮಾರು 290 ಆಟಗಾರರು ಆಡಿದ್ದು ಇದರಲ್ಲಿ ಕೇವಲ 4 ಜನರು ಮಾತ್ರ ಪರಿಶಿಷ್ಟ ಜಾತಿ(ಎಸ್ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್ಟಿ) ಸಮುದಾಯಕ್ಕೆ ಸೇರಿದ ಜನರು ಆಡಿದ್ದಾರೆ ಎಂದು ವರದಿ ಮಾಡಿತ್ತು.
ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಸೇರಿದ ಎಷ್ಟು ಪ್ರತಕರ್ತರಿದ್ದಾರೆ. ನಿಮ್ಮ ಸಂಸ್ಥೆಯ ಹಿರಿಯ ಸಂಪಾದಕರು ಎಸ್ಸಿ ಅಥವಾ ಎಸ್ಟಿ ಆಗಿದ್ದಾರಾ. ಕ್ರೀಡೆಗಳು ಪ್ರಾಯಶಃ ಒಂದು ಕ್ಷೇತ್ರವಾಗಿದ್ದು ಇದು ಜಾತಿಗಳ ಅಡೆತಡೆಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಂತಿದೆ. ಆಟಗಾರರು ಹೊಂದಿಕೊಂಡು ಆಡುತ್ತಾರೆ ಆದರೆ ಇಂತಹ ಪತ್ರಿಕೆಗಳು ದ್ವೇಷವನ್ನು ಹರಡುತ್ತಿವೆ ಎಂದು ಮೊಹಮ್ಮದ್ ಕೈಫ್ ಪ್ರಶ್ನಿಸಿದ್ದಾರೆ.
ಇನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಬೌಲಿಂಗ್ ನಲ್ಲಿ ನಾಲ್ಕು ದಲಿತ ಭಾರತೀಯರ ಪೈಕಿ ಮೂವರು ಮಂದಿ ವೇಗಿಗಳು ಇನ್ನು ಎಂಟು ಮುಸ್ಲಿಂರ ಪೈಕಿ ಐದು ಆಟಗಾರರು ಬೌಲಿಂಗ್ ನಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಇನ್ನು ಐಪಿಎಲ್ ನಲ್ಲಿ 27 ಮುಸ್ಲಿಂರು ಬೌಲಿಂಗ್ ಮಾಡಿದ್ದಾರೆ. ಇನ್ನು 8 ಮಂದಿ ಆಲ್ ರೌಂಡರ್ ಆಗಿದ್ದು ಇನ್ನು 8 ಮಂದಿ ಮಾತ್ರ ಬ್ಯಾಟಿಂಗ್ ನಲ್ಲಿ ಮಿಂಚಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ