ನವದೆಹಲಿ: ಕೆಲಸದ ವೀಸಾ ಅರ್ಜಿಗಳು ತಿರಸ್ಕೃತವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಇನ್ಫೋಸಿಸ್ ಸಂಸ್ಥೆ, ಇದರಿಂದ ಗ್ರಾಹಕರ ಯೋಜನೆ ವೆಚ್ಚಗಳು ಅಧಿಕವಾಗುವುದಲ್ಲದೆ ವಿಳಂಬವಾಗುವ ಸಾಧ್ಯತೆಯಿದೆ ಎಂದು ಹೇಳಿದೆ.ಅಮೆರಿಕಾ, ಆಸ್ಟ್ರೇಲಿಯಾ ಮೊದಲಾದ ದೇಶಗಳು, ಭಾರತೀಯ ಐಟಿ ಉದ್ಯೋಗಿಗಳಿಗೆ ಕೆಲಸದ ವೀಸಾ ನೀಡುವುದರಲ್ಲಿ ಸೂಕ್ಷ್ಮ ಪರಿಶೀಲನೆ ಮಾಡುತ್ತಿರುವುದರಿಂದ ಪ್ರಾಜೆಕ್ಟ್ ಗಳ ಕೆಲಸದಲ್ಲಿ ವಿಳಂಬವಾಗುತ್ತಿರುವುದು ಮನಗಂಡು ಪ್ರಮುಖ ಕೆಲಸದ ಮಾರುಕಟ್ಟೆಯಲ್ಲಿ ಸ್ಥಳೀಯರನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ.ಇತ್ತೀಚಿನ ದಿನಗಳಲ್ಲಿ ವೀಸಾ ಅರ್ಜಿಗಳ ತಿರಸ್ಕಾರದಲ್ಲಿ ಹೆಚ್ಚಳವಾಗಿದೆ. ಇದರಿಂದ ಕಂಪೆನಿಯ ಕೆಲಸದ ಮೇಲೆ ಪರಿಣಾಮ ಉಂಟಾಗಿದೆ. ಈ ಪರಿಸ್ಥಿತಿ ಮುಂದುವರಿದರೆ ಸಮಯಕ್ಕೆ ಸರಿಯಾಗಿ ವೀಸಾ ಪಡೆದು ಸಿಬ್ಬಂದಿಗಳಿಂದ ಯೋಜನೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಪ್ರಾಜೆಕ್ಟ್ ಗಳು ವಿಳಂಬವಾಗುವುದಲ್ಲದೆ ಹೆಚ್ಚಿನ ವೆಚ್ಚವಾಗುತ್ತದೆ ಎಂದು ಇನ್ಫೋಸಿಸ್ ಹೇಳಿದೆ.ಕಂಪೆನಿಯು ವೀಸಾಗೆ ಅವಧಿಗಿಂತ ಮೊದಲೇ ಅರ್ಜಿಗಳನ್ನು ಸಲ್ಲಿಸಬೇಕಾಗಬಹುದು ಅಥವಾ ಇಂತಹ ವೀಸಾಗಳ ನಿರ್ವಹಣೆಯಿಂದ ಹೆಚ್ಚುವರಿ ವೆಚ್ಚ ಉಂಟಾಗಬಹುದು ಎಂದು ಹೇಳಿದ್ದಾರೆ.ಅಮೆರಿಕಾ ಸರ್ಕಾರ ವಲಸೆ ಮತ್ತು ಕೆಲಸ ಅನುಮತಿ ನಿಯಮದಲ್ಲಿ ಬದಲಾವಣೆ ತಂದರೆ ಕಂಪೆನಿಯ ಅಂತಾರಾಷ್ಟ್ರೀಯ ಕಾರ್ಯತಂತ್ರ ಮತ್ತು ಉದ್ಯಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದಿದೆ.ಈ ಹಿಂದೆ ಇನ್ಫೋಸಿಸ್, ಅಮೆರಿಕಾ, ಆಸ್ಟ್ರೇಲಿಯಾ ಮೊದಲಾದ ದೇಶಗಳ ಕಠಿಣ ಕೆಲಸದ ವೀಸಾದಿಂದಾಗಿ ತನ್ನ ಉದ್ಯಮ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ, ಸ್ಥಳೀಯರನ್ನು ನೇಮಿಸಿಕೊಂಡು ಅವರಿಗೆ ಕೆಲಸದ ತರಬೇತಿ ನೀಡಲಾಗುವುದು ಎಂದು ಹೇಳಿಕೆ ನೀಡಿತ್ತು.ಕಳೆದ ಕೆಲ ತಿಂಗಳಲ್ಲಿ ಅಮೆರಿಕಾ, ಆಸ್ಟ್ರೇಲಿಯಾ ಮೊದಲಾದ ದೇಶಗಳು ತಾತ್ಕಾಲಿಕ ಕೆಲಸ ವೀಸಾ ನೀಡಿಕೆಯಲ್ಲಿ ಕಠಿಣ ಕ್ರಮಗಳನ್ನು ಅನುಸರಿಸುತ್ತಿವೆ. ಇದರಿಂದಾಗಿ ಸಾಗರೋತ್ತರ ಭಾರತೀಯ ಐಟಿ ಕಂಪೆನಿಗಳು ವೀಸಾಗೆ ಹೆಚ್ಚು ಅವಲಂಬಿತವಾಗದೆ ಸ್ಥಳೀಯರನ್ನು ನೇಮಕ ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಎರಡು ವರ್ಷಗಳಲ್ಲಿ ಅಮೆರಿಕಾದಲ್ಲಿ ನಾಲ್ಕು ತಂತ್ರಜ್ಞಾನ ಮತ್ತು ಸಂಶೋಧನೆ ಕೇಂದ್ರಗಳನ್ನು ಸ್ಥಾಪಿಸಿ ಸುಮಾರು 10 ಸಾವಿರ ಸ್ಥಳೀಯರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಇನ್ಫೋಸಿಸ್ ಹೇಳಿತ್ತು. ಅದರಲ್ಲಿ 4 ಸಾವಿರ ಮಂದಿಗೆ ಈಗಾಗಲೇ ಕೆಲಸ ನೀಡಲಾಗಿದೆ.
Related Articles
ಇನ್ಫೋಸಿಸ್ ಸಿಎಫ್ಓ ಎಂ ಡಿ ರಂಗನಾಥ್ ರಾಜೀನಾಮೆ
Seen By: 43 ಬೆಂಗಳೂರು: ಐಟಿ ದಿಗ್ಗಜ ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಾಹಕ ಎಂ.ಡಿ ರಂಗನಾಥ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸುಮಾರು 18 ವರ್ಷಗಳಿಂದ ಇನ್ಫೋಸಿಸ್ ಜೊತೆ [more]
ಇನ್ಫೋಸಿಸ್ ಸಂಸ್ಥೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಮಾಜಿ ಸಿಎಫ್ಓ ರಾಜೀವ್ ಬನ್ಸಾಲ್
September 19, 2018
VD
ವಾಣಿಜ್ಯ
Comments Off on ಇನ್ಫೋಸಿಸ್ ಸಂಸ್ಥೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಮಾಜಿ ಸಿಎಫ್ಓ ರಾಜೀವ್ ಬನ್ಸಾಲ್
Seen By: 45 ಬೆಂಗಳೂರು: ಇನ್ಫೋಸಿಸ್ ಮಾಜಿ ಮುಖ್ಯ ಹಣಕಾಸು ಅಧಿಕಾರಿ ರಾಜೀವ್ ಬನ್ಸಾಲ್ ಸಂಸ್ಥೆಯ ವಿರುದ್ಧವೇ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಬೆಂಗಳೂರು ನಗರದ ನ್ಯಾಯಾಲಯವೊಂದರಲ್ಲಿ ಅವರು ಸಾಫ್ಟ್ [more]
ಕಾಂಗ್ನಿಜೆಂಟ್ ಆಯ್ತು ಈಗ ಇನ್ಫೋಸಿಸ್ ಕಂಪನಿಯ 10 ಸಾವಿರ ಉದ್ಯೋಗ ಕಡಿತ
November 5, 2019
Samachar Network-NP
ರಾಜ್ಯ, ರಾಷ್ಟ್ರೀಯ
Comments Off on ಕಾಂಗ್ನಿಜೆಂಟ್ ಆಯ್ತು ಈಗ ಇನ್ಫೋಸಿಸ್ ಕಂಪನಿಯ 10 ಸಾವಿರ ಉದ್ಯೋಗ ಕಡಿತ
Seen By: 42 ನವದೆಹಲಿ: ಕಾಂಗ್ನಿಜೆಂಟ್ ಕಂಪನಿ ಸುಮಾರು ಆರು ಸಾವಿರ ಮಂದಿ ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಇದೀಗ ಐಟಿ ವಲಯದ ಪ್ರತಿಷ್ಠಿತ ಕಂಪನಿ ಇನ್ಫೋಸಿಸ್ [more]