ಶಾಸಕ ರಾಮದಾಸ್ ಮನೆ ಮುಂದೆ ಪ್ರೇಮಾ ಕುಮಾರಿ ಆತ್ಮಹತ್ಯೆ ಯತ್ನ

ಮೈಸೂರು:ಜು-೨೨: ಶಾಸಕ ರಾಮದಾಸ್ ಮನೆ ಮುಂದೆ ಪ್ರೇಮಾಕುಮಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಚುನಾವಣೆ ವೇಳೆ ಶಾಸಕ ರಾಮದಾಸ್ ಅವರು ಮದುವೆ ಮಾಡಿಕೊಳ್ಳುತ್ತೇನೆ ಎಂದು ಮಾತುಕೊಟ್ಟು ಈಗ ಮಾತಿಗೆ ತಪ್ಪಿದ್ದಾರೆ ಎಂದು ಆರೋಪಿಸಿ ಪ್ರೇಮಾ,ವೇಲ್ ನಿಂದ ಕುತ್ತಿಗೆ ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಚುನಾವಣೆಗೂ ಮುನ್ನ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ಪ್ರೇಮಾ ನಾಮಪತ್ರ ಸಲ್ಲಿಸುವುದನ್ನು ರಾಮದಾಸ್ ತಡೆದಿದ್ದರು. ಈಗ ಗೆದ್ದ ಮೇಲೆ ಮಾತು ತಪ್ಪಿರುವ ರಾಮದಾಸ್, ಕ್ಯಾರೆ ಅನ್ನದೆ ಓಡಾಡುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಪ್ರೇಮಾ ರಾಮದಾಸ್ ವಿರುದ್ದ ಹೋರಾಟ ನಡೆಸಿದ್ದಾರೆ. ‌ಅಂತಿಮವಾಗಿ ರಾಮದಾಸ್ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದು, ಪೋಲಿಸರ ಮನವೊಲಿಕೆಗೂ ಬಗ್ಗದಿದ್ದಾಗ ಪ್ರೇಮಕುಮಾರಿಯನ್ನು ‌ವಿದ್ಯಾರಣ್ಯಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

prema kumari,attempts suicide in front of BJP MLA Ramdas’ house

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ