ಕಾಂಗ್ರೆಸ್‌ಗೆ ಮುಖಭಂಗ, ವಿಪಕ್ಷಗಳ ಅವಿಶ್ವಾಸ ವಿರುದ್ಧ ಗೆದ್ದ ಪ್ರಧಾನಿ ಮೋದಿ!

ನವದೆಹಲಿ: ಕಾಂಗ್ರೆಸ್ ನೇತೃತ್ವದ ಯುಪಿಎಗೆ ತೀವ್ರ ಮುಖಭಂಗವಾಗಿದ್ದು ವಿಪಕ್ಷಗಳ ಅವಿಶ್ವಾಸ ನಿರ್ಣಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಭರ್ಜರಿ ಗೆಲುವು ಸಾಧಿಸಿದೆ.
ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಸೋಲು ಕಂಡಿದೆ. ಮ್ಯಾಜಿಕ್ ನಂಬರ್ ಗೆ 248 ಮತಗಳು ಬೇಕಿದ್ದು ನರೇಂದ್ರ ಮೋದಿ ಸರ್ಕಾರಕ್ಕೆ 325 ಮತಗಳು ಬಂದಿವೆ. ಕಾಂಗ್ರೆಸ್ ನೇತೃತ್ವದ ಯುಪಿಎ ಅವಿಶ್ವಾಸ ನಿರ್ಣಯ ಪರವಾಗಿ 126 ಮತಗಳನ್ನು ಪಡೆದಿದೆ.
451 ಸಂಸದರು ಲೋಕಸಭೆಯಲ್ಲಿ ಹಾಜರಿದ್ದು ಬಟನ್ ಒತ್ತುವ ಮೂಲಕ ಮತ ಚಲಾಯಿಸಿದರು. ಇನ್ನು ಮೋದಿ ಸರ್ಕಾರದ ಪರವಾಗಿ 325 ಮತಗಳು ಬಂದಿದ್ದು 199 ಮತಗಳ ಅಂತರದಿಂದ ಗೆಲುವು ಸಾಧಿಸಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ