ತ್ರಿಪುರ ಚಿಟ್‌ ಕಂಪನಿಯ 250 ಕೋಟಿ ವಂಚನೆ!

ಬೆಂಗಳೂರು: ಚಿಟ್‌ ಫಂ0ಡ್‌ ಸಂಸ್ಥೆಗಳ ಮೋಸದ ಬಗ್ಗೆ ಬಯಲಾಗುತ್ತಿದ್ದರೂ, ಜನ ಮಾತ್ರ ಇವರಿಂದ ದೂರವಾಗುತ್ತಿಲ್ಲ!
ಇದೀಗ ಬೆಂಗಳೂರಿನಲ್ಲಿ ಮತ್ತೂಂದು ಚಿಟ್‌ ಫಂ್ಡ್‌ ಕಂಪನಿಯ ಮೋಸ ಬಯಲಾಗಿದ್ದು ಇದರ ಮಾಲೀಕ 250 ಕೋಟಿ ರೂ. ಪಂಗನಾಮ ಹಾಕಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಮಲ್ಲೇಶ್ವರಂನಲ್ಲಿದ್ದ ತ್ರಿಪುರ ಚಿಟ್‌ ಫಂ್ಡ್‌ ಕಂಪನಿಯ ಮುಖ್ಯಸ್ಥ ಕೃಷ್ಣಪ್ರಸಾದ್‌ ಮತ್ತು ಆತನ ಸಹೋದ್ಯೋಗಿ ವೇಣು ಎಂಬುವವರು ನಾಲ್ಕು ರಾಜ್ಯಗಳ 30 ಸಾವಿರ ಮಂದಿಗೆ ಮೋಸ ಮಾಡಿದ್ದಾರೆ.
18 ವರ್ಷಗಳ ಹಿಂದೆ ಆರೋಪಿ ಕೃಷ್ಣಪ್ರಸಾದ್‌ ತಮಿಳುನಾಡಿನಲ್ಲಿ ತ್ರಿಪುರ ಚಿಟ್‌ ಫಂಕಡ್‌ ಕಂಪನಿ ತೆರೆದಿದ್ದು, ಇದನ್ನು ಕರ್ನಾಟಕ, ಕೇರಳ, ಆಂಧ್ರಪ್ರದೇಶದಲ್ಲಿ ವಿಸ್ತರಿಸಿ ನೂರಾರು ಶಾಖೆಗಳು ಹಾಗೂ ಉಪ ಶಾಖೆಗಳನ್ನು ತೆರೆದು ಸಾವಿರಾರು ಜನರನ್ನು ನೋಂದಾಯಿಸಿಕೊಂಡಿದ್ದರು. ಹೂಡಿಕೆ ಹೆಸರಿನಲ್ಲಿ ನಾಲ್ಕು ರಾಜ್ಯದ ಸುಮಾರು 30 ಸಾವಿರ ಮಂದಿಯಿಂದ ಏಜೆಂಟರ ಮೂಲಕ ನೂರಾರು ಕೋಟಿ ರೂ. ಸಂಗ್ರಹಿಸಿದ್ದ. ಕರ್ನಾಟಕದಲ್ಲೇ 85 ಕೋಟಿ ರೂ. ವಂಚನೆ ಮಾಡಿದ್ದಾನೆ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಆರಂಭದಲ್ಲಿ ನಿಗದಿತ ಸಮಯಕ್ಕೆ ಹಣ ಹಿಂದಿರುಗಿಸುತ್ತಿದ್ದ ಕೃಷ್ಣಪ್ರಸಾದ್‌ ಕಳೆದ ಅಕ್ಟೋಬರ್‌ನಿಂದ ಹಣ ವಾಪಸ್‌ ನೀಡದೆ ತಲೆಮರೆಸಿಕೊಂಡಿದ್ದ. ಇತ್ತ ಹೂಡಿಕೆ ಮಾಡಿದ್ದವರು ಕಂಪನಿಯ ಏಜೆಂಟರಿಗೆ ಹಣ ವಾಪಸ್‌ ಮಾಡುವಂತೆ ಒತ್ತಡ ಹೇರುತ್ತಿದ್ದಂತೆ ಎಲ್ಲ ಶಾಖೆಗಳ ನಿರ್ದೇಶಕರು ನಾಪತ್ತೆಯಾಗಿದ್ದರು. ಈ ಸಂಬಂಧ ಹಣ ಕಳೆದುಕೊಂಡವರು ಸ್ಥಳೀಯ ಠಾಣೆಗಳಿಗೆ ದೂರು ನೀಡಿದ್ದು, ಕ್ರಮಕ್ಕೆ ಒತ್ತಾಯಿಸಿದ್ದರು. ಅಲ್ಲದೆ, ನಗರ ಪೊಲೀಸ್‌ ಆಯುಕ್ತರನ್ನು ಭೇಟಿಯಾಗಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು.
ರಾಜ್ಯದಲ್ಲಿ 85 ಕೋಟಿ ರೂ. ವಂಚನೆ
ಆರೋಪಿಯು ಕರ್ನಾಟಕದಲ್ಲಿ 10 ಸಾವಿರಕ್ಕೂ ಅಧಿಕ ಮಂದಿಗೆ 85 ಕೋಟಿ ರೂ. ವಂಚಿಸಿದ್ದಾನೆ. ಈತನ ವಿರುದ್ಧ ಮಲ್ಲೇಶ್ವರಂ ಠಾಣೆವೊಂದರಲ್ಲಿಯೇ 40 ವಂಚನೆ ಪ್ರಕರಣಗಳು ದಾಖಲಾಗಿವೆ. ಅಲ್ಲದೆ ನಗರದ ಇತರೆ 11 ಠಾಣೆಗಳಲ್ಲಿಯೂ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಲ್ಲೇಶ್ವರಂ ಕಚೇರಿ ಎದುರು ಪ್ರತಿಭಟನೆ
ಆರೋಪಿಯ ಬಂಧನದ ವಿಚಾರ ತಿಳಿಯುತ್ತಿದ್ದಂತೆ ನೂರಾರು ಮಂದಿ ಗ್ರಾಹಕರು ಬುಧವಾರ ಬೆಳಗ್ಗೆ ಮಲ್ಲೇಶ್ವರಂನಲ್ಲಿರುವ ತ್ರಿಪುರ ಚಿಟ್‌ಫಂಿಡ್‌ ಕಂಪನಿ ಎದುರು ಜಮಾಯಿಸಿ ಆರೋಪಿಯಿಂದ ಹಣ ಕೊಡಿಸುವಂತೆ ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಗ್ರಾಹಕರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ