![Porn-stars](http://kannada.vartamitra.com/wp-content/uploads/2018/07/Porn-stars-673x381.jpg)
ತಿರುವನಂತಪುರ: ಜನರನ್ನು ಆಕರ್ಷಿಸುವ ಸಲುವಾಗಿ ಬಸ್ ಮಾಲೀಕರು ತಮ್ಮ ವಾಹನಗಳ ಮೇಲೆ ದೇವರ ಚಿತ್ರ, ಸುಂದರ ಪ್ರವಾಸಿ ತಾಣಗಳ ಚಿತ್ರಗಳನ್ನು ಹಾಕುವುದು ಸಾಮಾನ್ಯ.
ಆದರೆ ಕೇರಳದಲ್ಲಿ ಖಾಸಗಿ ಬಸ್ ಮಾಲೀಕರೊಬ್ಬರು, ತಮ್ಮ ಬಸ್ ತುಂಬೆಲ್ಲಾ ನೀಲಿ ಚಿತ್ರ ತಾರೆಯರ ಚಿತ್ರಗಳನ್ನು ಹಾಕಿ ಜನರ ಗಮನವನ್ನು ಸೆಳೆಯುವ ಯತ್ನ ಮಾಡಿದ್ದಾರೆ. ಬಸ್ ನ ತುಂಬೆಲ್ಲಾ ನೀಲಿ ಚಿತ್ರ ತಾರೆಯರಾದ ಸನ್ನಿ ಲಿಯೋನ್, ಮಿಯಾ ಖಲೀಫಾ, ಜೊನಿ ಸಿನ್ಸ್, ಜೊರ್ಡಿ ಎಲ್ ನಿನಿ ಮತ್ತು ಕಾಟ್ರ್ನಿ ಕೇನ್ ಚಿತ್ರಗಳು ವಾಹನದ ಮೇಲೆ ರಾರಾಜಿಸುತ್ತಿವೆ.
ಈ ಬಸ್ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಂದಹಾಗೆ ಬಸ್ ಮೇಲೆ ಈ ತಾರೆಯರ ಚಿತ್ರ ಬಿಡಿಸಲು 2.6 ಲಕ್ಷ ರುಪಾಯಿ ವೆಚ್ಚ ಮಾಡಲಾಗದೆ.