ಕ್ರಿಕೆಟ್: ಇಂಗ್ಲೆಂಡ್ ತಂಡಕ್ಕೆ ಕಬ್ಬಿಣದ ಕಡಲೆ ಟೀಮ್ ಇಂಡಿಯಾದ ಈ ಐವರು!

ಮ್ಯಾಂಚೆಸ್ಟರ್: ಮೂರು ಟಿ-20, ಮೂರು ಏಕದಿನ ಹಾಗೂ ಐದು  ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡದ ಐವರು ಪ್ರಮುಖ ಆಟಗಾರರು ಇಂಗ್ಲೆಂಡ್ ತಂಡಕ್ಕೆ ಕಬ್ಬಿಣದ ಕಡಲೆಯಾಗಿದ್ದು, ಏಕದಿನ ಪಂದ್ಯದಲ್ಲಿ ಮತ್ತೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಸ್ಥಾಪಿಸಲು ಎದುರು ನೋಡುತ್ತಿದ್ದಾರೆ.

ವಿರಾಟ್ ಕೊಹ್ಲಿ ಯಾವುದೇ ಮಾದರಿಯದ್ದೇ ಆಗಿರಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ,ರನ್ ತಂದುಕೊಟ್ಟುವ   ಪ್ರಮುಖ ಆಟಗಾರ. 2017-18ರ ಅವಧಿಯಲ್ಲಿ 11 ನಿಗದಿತ ಓವರ್ ಗಳ ಪಂದ್ಯದಲ್ಲಿ 455 ರನ್  ಗಳಿಸಿದ್ದಾರೆ.

ಆದಾಗ್ಯೂ, 2014ರ ಇಂಗ್ಲೆಂಡ್  ಪ್ರವಾಸದಲ್ಲಿ  10 ಇನ್ನಿಂಗ್ಸ್ ನಲ್ಲಿ 134 ರನ್ ಗಳನ್ನಷ್ಟೇ ಗಳಿಸಿದ್ದರು. 1-3 ಅಂತರದಿಂದ ಭಾರತ ಟೆಸ್ಟ್ ನಲ್ಲಿ ಸೋಲಿಗೆ ಶರಣಾಗಿದ್ದರು. ಸಹಸ್ರಾರು ಕ್ರಿಕೆಟ್ ಅಭಿಮಾನಿಗಳು ಕೊಹ್ಲಿ ಮೇಲೆ ಭರವಸೆ ಇಟ್ಟಿದ್ದಾರೆ.

ಡಿಪೆಂಡೆಬಲ್ ಧೋನಿ

ಭಾರತ ಟೆಸ್ಟ್ ನಲ್ಲಿ ನಂಬರ್ 1 ಸ್ಥಾನ ಪಡೆಯುವಲ್ಲಿ  ವಿಕೆಟ್ ಕೀಪರ್, ಬ್ಯಾಟ್ಸ್ ಮನ್  ಮಹೇಂದ್ರಸಿಂಗ್ ಧೋನಿ ಪ್ರಮುಖ ನೆರವು ನೀಡಿದ್ದಾರೆ. ಏಕ ದಿನ ಪಂದ್ಯದಲ್ಲೂ ಪ್ರಮುಖ ಫಿನಿಷರ್ ಕೂಡಾ ಆಗಿದ್ದಾರೆ. ಇಂಗ್ಲೆಂಡ್ ವಿರುದ್ದದ 25 ಪಂದ್ಯಗಳಲ್ಲಿ 882 ರನ್ ಗಳಿಸಿದ್ದಾರೆ. ಐಪಿಎಲ್ ನಲ್ಲಿ ಚನ್ನೈ ಸೂಪರ್ ಕಿಂಗ್ಸ್ ನಾಯಕರಾಗಿದ್ದ ಧೋನಿ, 2019ರ ನಲ್ಲಿ ನಡೆಯಲಿರುವ ವಿಶ್ವಕಪ್ ನಲ್ಲಿ ಇರುತ್ತಾರೆಯೇ ಎಂಬುದನ್ನು ಈ ಪಂದ್ಯಗಳು ನಿರ್ಧರಿಸಲಿವೆ.
ಇತ್ತೀಚಿಗೆ ಆಸ್ಟ್ರೇಲಿಯಾ ತಂಡವನ್ನು 5-0 ಅಂತರದಿಂದ ಸೋಲಿಸಿರುವ ಇಂಗ್ಲೆಂಡ್ ತಂಡದ ಜಾಸ್ ಬಟ್ಲರ್  , ಧೋನಿ ಶಾಂತಿಯುತ ಆಟಗಾರರಾಗಿದ್ದು, ಯಾವುದೇ ರೀತಿಯ ಗದ್ದಲ ಉಂಟುಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ

 ಆಲ್ ರೌಂಡರ್  ಹಾರ್ದಿಕ್ ಪಾಂಡ್ಯ ಭಾರತದ ಹೊಸ ರಾಕ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ  ಭರವಸೆಯ ಆಟಗಾರರಾಗಿದ್ದಾರೆ.  ಪಾಂಡ್ಯ  ವೃತ್ತಿ ಆರಂಭಿಸಿದಾಗ ಅವರನ್ನು ಕಪಿಲ್ ದೇವ್ ಅವರಿಗೆ ಹೋಲಿಕೆ ಮಾಡಲಾಗುತಿತ್ತು.  ಜನವರಿ 2016 ರಿಂದಲೂ  ಟಿ-20 ಪಂದ್ಯಗಳಲ್ಲಿ ಆಡುತ್ತಿದ್ದಾರೆ.  ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಶತಕ ದಾಖಲಿಸಿದ್ದ ಪಾಂಡ್ಯ  ನಿಗದಿತ ಓವರ್ ಗಳ ಪಂದ್ಯದಲ್ಲಿ 65 ವಿಕೆಟ್ ಪಡೆದಿದ್ದಾರೆ.

ಕುಲದೀಪ್ ಯಾದವ್

 ರೈಸಿಂಗ್ ಸ್ಟಾರ್  ಕುಲದೀಪ್ ಯಾದವ್ , ಕೂಡಾ ಉತ್ತಮ ಬೌಲರ್ ಹಾಗೂ ಬ್ಯಾಟ್ಸ್ ಮನ್ ಕೂಡಾ ಆಗಿದ್ದಾರೆ. ಕಳೆದ ವರ್ಷ ಎಡ ಗೈ ಸ್ಪಿನರ್ 20 ಏಕದಿನ ಪಂದ್ಯಗಳಲ್ಲಿ   39 ವಿಕೆಟ್  ಗಳನ್ನು  ಪಡೆದುಕೊಂಡಿದ್ದರು. ಚಹಾಲ್ ಜೊತೆಗೆ ಉತ್ತಮ ಪ್ರದರ್ಶನ ತೋರುತ್ತಾರೆ.

ಭುವನೇಶ್ವರ್ ಕುಮಾರ್  

 ಭುವನೇಶ್ವರ್ ಕುಮಾರ್ 19 ವರ್ಷದೊಳಗಿನ  ಕ್ರಿಕೆಟ್ ಪಂದ್ಯದಲ್ಲಿ  ಕ್ರಿಕೆಟ್ ದೇವರು ಸಚಿನ್ ತೆಂಡೊಲ್ಕರ್ ಅವರನೇ   ಮೊದಲು ಡೆಕ್ ಔಟ್ ಮಾಡಿದ ಖ್ಯಾತಿಗೆ ಒಳಗಾಗಿದ್ದು, ಏಕದಿನ ಹಾಗೂ ಟಿ-20 ಪಂದ್ಯಗಳಲ್ಲಿ 126 ವಿಕೆಟ್ ಪಡೆದಿದ್ದಾರೆ.
ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮಾ,  ಜಸ್ಪ್ರೀತ್  ಬ್ರೂಮಾ, ಉಮೇಶ್ ಯಾದವ್ ಅವರಂತಹ ಉತ್ತಮ ಬೌಲರ್ ಗಳನ್ನು ನಾವು ಹೊಂದಿರುವುದಾಗಿ ಇತ್ತೀಚಿಗಷ್ಟೇ ಸಚಿನ್ ತೆಂಡೊಲ್ಕರ್ ಹೇಳಿಕೆ ನೀಡಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ