
ಮಾಸ್ಕೋ(ರಷ್ಯಾ): ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಜಿದ್ದಾ ಜಿದ್ದಿನ ಹೋರಾಟಗಳು ನಡೆಯುತ್ತಿದ್ದು ಕ್ವಾರ್ಟರ್ ಫೈನಲ್ ಗೆ ಎಂಟ್ರಿ ಕೊಡಲು ತಂಡಗಳು ಕಸರತ್ತು ನಡೆಸಿವೆ.
ನಿನ್ನೆ ನಡೆದ ಪಂದ್ಯದಲ್ಲಿ ಜಪಾನ್ ತಂಡವನ್ನು 3-2 ಗೋಲುಗಳಿಂದ ಮಣಿಸಿದ ಬೆಲ್ಜಿಯಂ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದೆ. ಉಭಯ ತಂಡಗಳು ತಲಾ ಎರಡು ಗೋಲುಗಳಿಂದ ಸಮಬಲ ಸಾಧಿಸಿದ್ದವು. ಈ ವೇಳೆ ಪಂದ್ಯ ಡ್ರಾನಲ್ಲಿ ಅಂತ್ಯವಾಗಲಿದೆ ಎಂದ ಊಹಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ನಸಿರ್ ಚಡ್ಲಿ ಗೋಲು ಬಾರಿಸಿ 3-2 ಗೋಲುಗಳಿಂದ ಪಂದ್ಯ ಗೆಲ್ಲಲು ಕಾರಣರಾದರು.