ಮುಂಬೈಯಲ್ಲಿ ಭಾರೀ ಮಳೆ : ಮೇಲ್ಸೇತುವೆ ಕುಸಿತ, ರೈಲು ಸಂಚಾರ ಸ್ಥಗಿತ

ಮುಂಬೈ: ನಗರದಲ್ಲಿ ಭಾರೀ ಮಳೆ ಸುರಿಯುತ್ತಿದ್ದು,ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಅಂಧೇರಿಯಲ್ಲಿ ಮಂಗಳವಾರ ಬೆಳಗ್ಗೆ ರೈಲ್ವೆ ಮೇಲ್ಸೇತುವೆಯ ಒಂದು ಭಾಗ ಕುಸಿದು ಬಿದ್ದು ರೈಲುಗಳ ಸಂಚಾರ ಸ್ಥಗಿತಗೊಂಡಿದೆ.

ಅಂಧೇರಿ ಪಶ್ಚಿಮ ಮತ್ತು ಪೂರ್ವಕ್ಕೆ ಸಂಪರ್ಕಿಸುವ ರೈಲುಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸೇತುವೆ ಕುಸಿತದಿಂದ ಐವರು ಗಾಯಗೊಂಡಿದ್ದಾರೆ.

ಗೋರೆಗಾಂವ್‌ ರೈಲು ಸಂಚಾರ ಸ್ಥಗಿತಗೊಂಡಿದ್ದು, ಚರ್ಚ್‌ಗೇಟ್‌ ನಿಂದ ಬಾಂದ್ರಾ ಮತ್ತು ಗೋರೆಗಾಂವ್‌ ನಿಂದ ವಿರಾರ್‌ ಸ್ಥಳೀಯ ರೈಲುಗಳ ಸಂಚಾರ ಎಂದಿನಂತಿದೆ.

ನಿತ್ಯವೂ ಇದೇ ಮಾರ್ಗದಲ್ಲಿ 25 ಲಕ್ಷಕ್ಕೂ ಹೆಚ್ಚು ಮಂದಿ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದು, ಸಂಚಾರಕ್ಕಾಗಿ ಪರದಾಡಬೇಕಾಗಿದೆ.

ಸ್ಥಳಕ್ಕೆ ಎನ್‌ಡಿಆರ್‌ಎಫ್, ಬಿಎಂಸಿ,ಆರ್‌ಪಿಎಫ್ ಅಧಿಕಾರಿಗಳು ದೌಡಾಯಿಸಿದ್ದು,ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ.

ನಗರದ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ