ಲೋಕಸಭೆಯಲ್ಲಿ ಮೂರು ನಾಲ್ಕು ಮಹಿಳೆಯರಿಗೆ ಟಿಕೆಟ್ ನೀಡಿ: ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು:ಜು-1: ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಮೂರು ನಾಲ್ಕು ಮಹಿಳಾ ಅಭ್ಯರ್ಥಿಗಳಿಗಾದರೂ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ‌ಹೆಬ್ಬಾಳ್ಕರ್ ಕಾಂಗ್ರೆಸ್ ಹೈಕಮಾಂಡ್ ಅನ್ನು ಒತ್ತಾಯಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯಕಾರಿಣಿ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ನಾಲ್ಕು ತಿಂಗಳ ಬಳಿಕ ಸಭೆ ನಡೆಸಿದ್ದೇವೆ, ಅಖಿಲ ಭಾರತ ಮಹಿಳಾ‌ ಕಾಂಗ್ರೆಸ್ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆದೇಶದ ಮೇರೆಗೆ ಪ್ರೊಜೆಕ್ಟ್ ಶಕ್ತಿ ಎನ್ನುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ.

ವಾಟ್ಸ್ ಆಪ್ ನಂಬರ್ ಅನ್ನು ರಾಹುಲ್ ಗಾಂಧಿ ನೀಡಿದ್ದು ಈ ನಂಬರ್ ನಿಂದ‌ ಮಹಿಳಾ ಕಾಂಗ್ರೆಸ್ ನ ಬಲವರ್ದಿಸಬಹುದು ,ಲೋಕಸಭಾ ಚುನಾವಣೆಯಲ್ಲಿ ಮಹಿಳೆಯ ಧ್ವನಿ ದೇಶದಲ್ಲಿ ರಾಹುಲ್ ಸಂಪರ್ಕಕ್ಕೆ ಸಹಾಯವಾಗಲಿದೆ, ಮುಂಬರುವ ದಿನದಲ್ಲಿ ಬೂತ್ ಮಟ್ಟದ ಕಾತ್ಯಕರ್ತರ ಜೊತೆ ನೇರವಾಗಿ ಸಂಪರ್ಕದಲ್ಲಿರಲು ಇದೊಂದು ಅತ್ಯಂತ ಗಮನಾರ್ಹ ಸಾಧನ ಆಗಲಿದೆ ಎಂದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರ ಪಾತ್ರದ ಕುರಿತು ಸಭೆಯಲ್ಲಿ‌ ಚರ್ಚೆ ನಡೆಸಲಾಗಿದೆ. ಮುಂಬರಲಿರುವ ಲೋಕಸಭೆ ಚುನಟವಣೆಯಲ್ಲಿ ಕನಿಷ್ಠ 3-4 ಮಹಿಳೆಯರಿಗಾದರೂ ಟಿಕೆಟ್ ನೀಡಬೇಕು,ಒಳ್ಳೆಯ ಅಭ್ಯರ್ಥಿಗಳ ಬೆನ್ನುತಟ್ಟಬೇಕು.ಹಳ್ಳಿಯಿಂದ ದಿಲ್ಲಿವರಗೂ ಮಹಿಳೆ ಮುಜುಗರದಿಂದಲೇ ಬರಬೇಕಿದೆ, ಲೋಕಸಭೆಯಲ್ಲಾದರೂ ಮೂರು ನಾಲ್ಕು ಜನರಿಗೆ ಟಿಕಟ್ ನೀಡಬೇಕು, ಸಂಪುಟ ವಿಸ್ತರಣೆಯಲ್ಲಿ ಮತ್ತೊಂದು ಸಚಿವ ಸ್ಥಾನ ಮಹಿಳೆಗೆ ನೀಡಲಿ ಎಂದು ಮನವಿ ಮಾಡಿದರು.

loksabha election,congress,lakshmi hebbalkar

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ