
ಎಕಟೆರಿನ್ಬರ್ಗ್ ಅರೆನಾ (ರಷ್ಯಾ): ಫಿಫಾ ವಿಶ್ವಕಪ್ ನ ಎಫ್ ಗುಂಪಿನ ಪಂದ್ಯದಲ್ಲಿ ಬುಧವಾರ ಮೆಕ್ಸಿಕೋ ವಿರುದ್ಧ ಸ್ವೀಡನ್ 3-0 ಅಂತರದಿಂದ ಜಯ ಸಾಧಿಸಿದೆ.
ಪಂದ್ಯದ ಪ್ರಥಮಾರ್ಧದಲ್ಲಿ ಯಾವ ತಂಡವೂ ಗೋಲು ಗಳಿಸಿಕೊಂಡಿರಲಿಲ್ಲ ಆದರೆ ದ್ವಿತೀಯಾರ್ಧದ ವೇಳೆಗೆ ಸ್ವೀಡನ್ ತಂಡವು ಮೂರು ಗೋಲುಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು.
ಸ್ವೀಡನ್ ಪರವಾಗಿ ಲುಸ್ಟಿಗ್ (50ನೇ ನಿಮಿಷ), ಅಗಸ್ಟೀನ್ಸನ್ (62ನೇ ನಿಮಿಷ) ಹಾಗೂ ಎಡ್ಸನ್ ಅಲ್ವಾರೆಜ್ (74ನೇ ನಿಮಿಷ) ಗೋಲು ದಾಖಲಿಸಿದ್ದಾರೆ.
ಇನ್ನು ಎಫ್ ಗುಂಪಿನಲ್ಲಿ ಸ್ವೀಡನ್ ಹಾಗೂ ಮೆಕ್ಸಿಕೋ ಎರಡೂ ತಂಡಗಳು ತಲಾ ಎರಡು ಪಂದ್ಯಗಳ ಗೆಲುವಿನೊಡನೆ ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ.