ಫಿಫಾ ವಿಶ್ವಕಪ್: ಉರುಗ್ವೆ ಎದುರು ಮಣಿದ ರಷ್ಯಾ, 3-0 ಅಂತರದಿಂದ ಸೋಲುಂಡ ಅತಿಥೇಯರು

ಸಮರಾ ಅರೆನಾ (ರಷ್ಯಾ): ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಸೋಮವಾರದ ಪಂದ್ಯದಲ್ಲಿ ಆತಿಥೇಯ ರಷ್ಯಾ ಮತ್ತು ಉರುಗ್ವೆ  ಎದುರಾಗಿದ್ದು ಉರುಗ್ವೆ ರಷ್ಯಾವನ್ನು 3-0 ಅಂತರದಿಂದ ಮಣಿಸಿದೆ.
ತವರು ನೆಲದಲ್ಲಿಯೇ ಆಘಾತಕಾರಿ ಸೋಲು ಕಂಡ ರಷ್ಯಾ ತಂಡಕ್ಕೆ ಈ ಫಲಿತಾಂಶ  ತೀವ್ರ ಹಿನ್ನೆಡೆಯಾಗಿದೆ.
ಪಂದ್ಯದ ಪ್ರಥಮಾರ್ಧದಲ್ಲಿ 2 , ದ್ವಿತೀಯಾರ್ಧದಲ್ಲಿ 1 ಗೋಲು ಗಳಿಸಿದ ಉರುಗ್ವೆ ರಷ್ಯಾದ ವಿರುದ್ಧ ವಿಜಯ ಸಾಧಿಸಿದೆ.
ಎ ಗುಂಪಿನ ಪಂದ್ಯದಲ್ಲಿ ಉರುಗ್ವೆ ನ ಲೂಯಿಸ್ ಸ್ವಾರೇಜ್  (10ನೇ ನಿಮಿಷ)  ಡೆನಿಸ್ ಚೆರಿಶೆವ್ (23ನೇ ನಿಮಿಷ) ದಲ್ಲಿ ಗೋಲು ಗಳಿಸಿದ್ದರೆ  ಕಡೆ ಕ್ಷಣದ ಪಂದ್ಯದ ವೇಳೆ ಇನ್ನೊಂದು ಗೋಲನ್ನು ಉರುಗ್ವೆ ನ ಎಡಿಸನ್ ಕವಾನಿ (90ನೇ ನಿಮಿಷ) ಬಾರಿಸಿ ತಂಡದ ಗೆಲುವಿಗೆ ಇನ್ನಷ್ಟು ಬಲ ತುಂಬಿದ್ದರು.
ರಷ್ಯಾ ಆಟಗಾರ ಇಗೊರ್ ಸ್ಮೊಲ್ನಿಕೋವ್ ವರ ವಿರುದ್ಧ ರೆಡ್ ಕಾರ್ಡ್ ಪ್ರದರ್ಶಿಸಿದ ಘಟನೆ ಸಹ ಇಂದು ನಡೆದಿದ್ದು ಅವರು ಪಂದ್ಯದಿಂದ ಹೊರನಡೆಯಬೇಕಾಯಿತು. ಫುಟ್ಬಾಲ್ ಪಂದ್ಯದ 36ನೇ ನಿಮಿಷದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು ರಷ್ಯಾ ಪರಾಭವಕ್ಕೆ ಇದು ಸಹ ಒಂದು ಕಾರಣ ಎನ್ನಬಹುದು.
ಇದೇ ವೇಳೆ ಪಂದ್ಯದ ಅಂತ್ಯಕ್ಕೆ ಮುನ್ನ ನಾಲ್ಕು ನಿಮಿಷದ ಹೆಚ್ಚುವರಿ ಕಾಲಾವಕಾಶ ನಿಡಲಾಗಿತ್ತು. ಆದರೆ ಈ ವೇಳೆ ಯಾವ ತಂಡದಿಂಡಲೂ ಗೋಲು ದಾಖಲಾಗಿರಲಿಲ್ಲ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ