ಸಹಕಾರಿ ಕ್ಷೇತ್ರದಲ್ಲಿನ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಎದುರಿಸುತ್ತಿರುವ ಸಮಸ್ಯೆಗಳು : ಮುಖ್ಯಮಂತ್ರಿಗಳಿಗೆ ಮನವಿ

 

ಶಿರಸಿ :
ಸಹಕಾರಿ ಕ್ಷೇತ್ರಗಳಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಧಾರವಾಡ ಹಾಲು ಒಕ್ಕೂಟದ ನಿದರ್ೇಶ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಪತ್ರ ಬರೆಯುವ ಮೂಲಕ ಪರಿಹಾರಕ್ಕೆ ಆಗ್ರಹಸಿದ್ದಾರೆ.
ಸದಾ ರೈತಪರ ಚಿಂತನೆಗಳ ಮೂಲಕ ರೈತರ ಕಷ್ಟ-ನಷ್ಟಗಳಿಗೆ ಸ್ಪಂದಿಸುತ್ತ, ಸಕ್ರಿಯ ರಾಜಕಾರಣದಲ್ಲಿ ಸಜ್ಜನ ರಾಜಕಾರಣಿಯಾಗಿ ಗುರುತಿಸಿಕೊಂಡು ಪ್ರಸ್ತುತ ಕನರ್ಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಿದ್ದು ತುಂಬಾ ಸಂತೋಷದಾಯಕವಾಗಿದೆ. ನೀವು ಸರಕಾರದ ಮುಖ್ಯಸ್ಥರಾಗಿ ಆಡಳಿತ ನಡೆಸಲು ಅಣಿಯಾದ ಈ ಸಂಧಂರ್ಭದಲ್ಲಿ ರಾಜ್ಯದ ಸ್ಥಿತಿಗತಿಗಳು ಅಷ್ಟೊಂದು ಪೂರಕವಾಗಿಲ್ಲವೆಂಬುದು ಕಹಿಸತ್ಯ. ಇಂದು ರಾಜ್ಯದ ಜನತೆ ಹಲವು ರೀತಿಯ ತೊಂದರೆಯನ್ನು ಈ ಸಮಾಜದಲ್ಲಿ ಎದುರಿಸುತ್ತಿದ್ದಾರೆ. ಅದರಲ್ಲೂ ರೈತರ ಸ್ಥಿತಿ ಹೇಳತೀರದು. ಸರಿಯಾದ ಸಮಯಕ್ಕೆ ಮಳೆ ಬಾರದೆ, ಬೆಳೆ ಬಾರದೆ, ಕೊನೆಗೆ ಬೆಳೆದಂತ ಬೆಳೆಗೆ ಬೆಲೆ ಬಾರದೆ ದಿನ ಕಷ್ಟದಲ್ಲಿಯೇ ಜೀವನ ನಡೆಸುವಂತಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ರೈತರನ್ನು ಆಥರ್ಿಕವಾಗಿ ಸ್ವಲ್ಪವಾದರೂ ಸಧೃಡಗೊಳಿಸಲು ಪೂರಕವಾದದ್ದು ಹೈನುಗಾರಿಕೆ. ರೈತರು ಇಂದು ಕೃಷಿಯ ಜೊತೆ ಜೊತೆಗೆ ಉಪ ಕಸುಬಾದ ಹೈನುಗಾರಿಕೆಯ ಕಡೆ ಹೆಚ್ಚೆಚ್ಚು ಗಮನ ನೀಡುತ್ತಿದ್ದಾರೆ. ಆದರೆ ಹೈನುಗಾರಿಕೆಯಲ್ಲೂ ಕೂಡ ಕೆಲವು ಸಮಸ್ಯೆಗಳಿಂದಾಗಿ ಅವನ ಜೀವನ ಅತಂತ್ರವಾಗುವ ಹಂತಕ್ಕೆ ಬಂದಿದೆ. ನಾನು ಈ ಪತ್ರ ಬರೆಯುವ ಮೂಲ ಉದ್ದೇಶವೆಂದರೆ ಹೈನುಗಾರಿಕೆಯ ಮೂಲಕವಾದರು ರೈತರ ಜೀವನವನ್ನು ಸ್ವಲ್ಪವಾದರೂ ನೆಮ್ಮದಿಯಿಂದ ಬದುಕುವಂತಾಗಲು ಇದರಲ್ಲಿರುವ ಕೆಲವು ಅಡೆತಡೆಗಳು ಹಾಗೂ ಅವುಗಳ ಪರಿಹಾರದ ಕುರಿತು ಈ ಜಿಲ್ಲೆಯ ಹೈನುಗಾರರ ಪ್ರತಿನಿಧಿಯಾಗಿ ಗೌರವಪೂರ್ವಕ ಸಲಹೆ ನೀಡಲು ಇಚ್ಚಿಸುತ್ತೇನೆ.
ನಮ್ಮ ರಾಜ್ಯದಲ್ಲಿ ಒಟ್ಟು 14 ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 20000 ಕ್ಕೂ ಹೆಚ್ಚು ಸಂಘಗಳು ರಾಜ್ಯದ ಹಳ್ಳಿಹಳ್ಳಿಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ ಈ ಸಂಘಗಳಲ್ಲಿ ಹಾಲನ್ನು ತೆಗೆದುಕೊಳ್ಳುವಾಗ ಎಸ್.ಎನ್.ಎಫ್ ಮತ್ತು ಜಿಡ್ಡಿನ ಅಂಶದ ಆಧಾರದ ಮೇಲೆ ಗುಣಮಟ್ಟವನ್ನು ನಿರ್ಧರಿಸಿ ದರ ನೀಡಲಾಗುತ್ತದೆ. ಹಾಲಿನಲ್ಲಿ ಕನಿಷ್ಟ 3.5 ಜಿಡ್ಡು ಮತ್ತು 8.5 ಎಸ್.ಎನ್.ಎಫ್ ಇರುವ ಹಾಲನ್ನು ಮಾತ್ರ ಸ್ವೀಕರಿಸಲಾಗುತ್ತಿದೆ. ಆದರೆ ಈ ಮಾನದಂಡವು ರಾಜ್ಯದಿಂದ ರಾಜ್ಯಕ್ಕೆ ಬೇರೆಯೆ ಇದೆ. ಅಲ್ಲಿನ ಮಣ್ಣಿನ ಗುಣಧರ್ಮ ಮತ್ತು ಭೌಗೋಳಿಕ ವಾತಾವರಣವನ್ನು ಗಣನೆಗೆ ತೆಗೆದುಕೊಂಡು ನಿರ್ಧರಿಸಲು ಅವಕಾಶವಿದ್ದು, ನಮ್ಮ ರಾಜ್ಯದ ಜಿಲ್ಲೆಗಳ ವೈವಿಧ್ಯತೆಯ ಪರಿಸರವನ್ನು ಗಮನದಲ್ಲಿಟ್ಟುಕೊಂಡು ಈ ಮಾನದಂಡವನ್ನು ಪುನಃ ನಿರ್ಧರಿಸುವ ಕೆಲಸವಾದಲ್ಲಿ ರೈತರಿಗೆ ನ್ಯಾಯ ದೊರಕಿಸಿ ಕೊಟ್ಟಂತಗುತ್ತದೆ (ಇದಕ್ಕೆ ಸಂಬಂಧಿಸಿದ ದಾಕಲಾತಿಯನ್ನು ಈ ಪತ್ರದೊಂದಿಗೆ ಲಗತ್ತಿಸಲಾಗಿದೆ).
ಪ್ರಸ್ತುತ ಹಾಲಿನ ದರವು ಅದರ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಇದ್ದು, ಹಾಲಿನ ಬೆಲೆಯನ್ನು ಹೆಚ್ಚಿಸುವ ಕೆಲಸವಾಗಬೇಕಿದೆ. ಈಗಾಗಲೇ ಸರಕಾರದಿಂದ 5.00 ರೂ. ಪ್ರೋತ್ಸಾಹಧನವನ್ನು ಗುಣಮಟ್ಟದ ಹಾಲಿಗೆ ಮಾತ್ರ ನೀಡಲಾಗುತ್ತಿದೆ , ಹೊರ ರಾಜ್ಯಗಳಿಗೆ ಹಾಗೂ ಹೊರದೇಶಗಳಿಗೆ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ರಫ್ತು ಮಾಡುವ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸರಕಾರದ ಮಧ್ಯಪ್ರವೇಶ ತೀರಾ ಅನಿವಾರ್ಯವಾಗಿದೆ.
ಪಶುಆಹಾರ:- ನಮ್ಮ ರಾಜ್ಯದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಅತಿವೃಷ್ಠಿ-ಅನಾವೃಷ್ಠಿಯ ಕಾರಣ ಆಥರ್ಿಕ ಭದ್ರತೆಯಿಲ್ಲದೆ ಕೃಷಿಯಿಂದ ಯುವಕರು ವಿಮುಖರಾಗುತ್ತಿದ್ದಾರೆ . ಹೈನುಗಾರಿಕೆಯತ್ತ ಯುವ ಸಮೂದಾಯ ಸ್ವಲ್ಪ ಪ್ರಮಾಣದಲ್ಲಿ ಆಕಷರ್ಿತರಾಗುತ್ತಿದ್ದು ಅವರಿಗೆ ಇದಕ್ಕೆ ಪೂರಕ ವಾತಾವರಣ ಕಲ್ಪಿಸಿಕೊಡಬೇಕಾಗಿದೆ. ಅತಿವೃಷ್ಠಿ-ಅನಾವೃಷ್ಠಿಯ ಕಾರಣ ರಾಸುಗಳಿಗೆ ಸರಿಯಾದ ಪ್ರಮಾಣದಲ್ಲಿ ಮೇವಿನ ಲಭ್ಯತೆ ಇಲ್ಲದೆ ಬದಲಿ ಮಾರ್ಗವಾಗಿ ಪಶುಆಹಾರ ಚೀಲಗಳನ್ನು ಕೊಳ್ಳುವಂತಾಗಿದೆ, ಇದರಿಂದಾಗಿ ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದೆ. ಅದರಲ್ಲೂ ಕನರ್ಾಟಕದ ಕರಾವಳಿ ಪ್ರದೇಶದ ಜಿಲ್ಲೆಗಳಲ್ಲಂತೂ ಹಾಲಿನ ಉತ್ಪಾದನೆ ಪಶು ಆಹಾರದ ಬಳಕೆಯ ಮೇಲೆ ನಿರ್ಧರಿಸುತ್ತದೆ. ನಾನೂ ಸಹ ಉತ್ತರಕನ್ನಡ ಜಿಲ್ಲೆಯವನಾಗಿ ಈ ಸಮಸ್ಯೆಯನ್ನು ಸ್ವತಃ ಅನುಭವಿಸಿದ್ದೇನೆ. ನಮ್ಮ ಜಿಲ್ಲೆಯಲ್ಲಿ ಬಹುಪಾಲು ಅರಣ್ಯವಿರುವದರಿಂದ ಮೇವಿನ ಬೆಳೆಗಳನ್ನು ಬೆಳೆಯಲು ಸಾಧ್ಯವಿಲ್ಲ. ಹೀಗಾಗಿ ಗುಣಮಟ್ಟದ ಹಾಲಿನ ಉತ್ಪಾದನೆಗಾಗಿ ಸಮತೋಲಿತ ಪಶು ಆಹಾರದ ಬಳಕೆ ತೀರ ಅವಶ್ಯವಾಗಿದ್ದು ರೈತರಿಗೆ ನಂದಿನಿ ಪಶುಆಹಾರವನ್ನು ಕೊಳ್ಳುವಾಗ ಸಕರ್ಾರವು 5.00 ರೂ. ಸಹಾಯಧನದ ಮಾದರಿಯಲ್ಲೆ ಪಶು ಆಹಾರಕ್ಕೂ ಕೂಡ ರಿಯಾಯಿತಿ(ಸಬ್ಸಿಡಿ) ಮೊತ್ತವನ್ನು ನೀಡಿದರೆ, ಹೈನೋಧ್ಯಮ ಸಮೃದ್ಧಿ ಹೊಂದಲು ಹಾಗೂ ಯುವಕರಿಗೆ ಲಾಭದಾಯಕ ಹೈನುಗಾರಿಕೆ ಮಾಡಲು ಅವಕಾಶ ಒದಗಿಸಿ ಕೊಟ್ಟಂತಾಗುತ್ತದೆ.
ರಾಜ್ಯದ ಹಳ್ಳಿಹಳ್ಳಿಗಳಲ್ಲಿ ಕಾರ್ಯನಿರ್ವಹಿಸುವ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಇಂದು ಉತ್ತಮವಾಗಿ ಕಾರ್ಯನಿರ್ವಹಿಸಲು ಕೆಲವು ಅವಶ್ಯಕ ಮೂಲಭೂತ ಸೌಕರ್ಯಗಳನ್ನು ಹೊಂದಬೇಕಾಗುತ್ತದೆ. ಅದರಲ್ಲಿ ಪ್ರಮುಖವಾಗಿ ಬಹುತೇಖ ಸಂಘಗಳು ಸ್ವಂತ ಕಟ್ಟಡವಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುವ ಈ ಸಂಘಗಳಿಗೆ ಕಟ್ಟಡ ಕಟ್ಟಿಕೊಳ್ಳಲು ಮತ್ತು ಮೂಲಭೂತ ಸೌಕರ್ಯಗಳನ್ನು ಹೊಂದಲು ಆಯಾ ಭಾಗದ ಶಾಸಕರ ಅನುದಾನದಲ್ಲಿ ಸ್ವಲ್ಪ ಮೊತ್ತವನ್ನು ವಿನಿಯೋಗಿಸಲು ಮತ್ತು ಜಿಲ್ಲಾ ಪಂಚಾಯತ ಅನುದಾನದಲ್ಲಿಯೂ ಕೂಡ ಅವಕಾಶ ನೀಡಬೇಕು.(ಹಾಲಿನ ಸಂಘಗಳು ಲಾಭದಾಯಕ ಸಂಸ್ಥೆಗಳೆಂದು ಪರಿಗಣಿಸಿ ಅನುದಾನ ನೀಡುತ್ತಿಲ್ಲ).

ಧಾರವಾಡ, ಹಾವೇರಿ,ಗದಗ, ಮತ್ತು ಉತ್ತರ ಕನ್ನಡ ಜಿಲ್ಲೆಯನ್ನೊಳಗೊಂಡ ಧಾರವಾಡ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಬರುವ 900 ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ ಸುಮಾರು 2000 ಕ್ಕೂ ಹೆಚ್ಚು ಸಿಬ್ಬಂಧಿಗಳು ಕಾರ್ಯದಶರ್ಿಗಳಾಗಿ, ಹಾಲು ಪರೀಕ್ಷಕರಾಗಿ, ಕೃತಕ ಗರ್ಭಧಾರಣೆಯ ಕಾರ್ಯಕರ್ತರಾಗಿ, ಕ್ಲಿನರ್ ಆಗಿ ಕಾರ್ಯನಿರ್ವಹಿಸುತ್ತಾರೆ. ಇದೇ ರೀತಿ ರಾಜ್ಯದಲ್ಲಿ ಬರುವ 14 ಒಕ್ಕೂಟಗಳ ವ್ಯಾಪ್ತಿಯಲ್ಲಿ ಸುಮಾರು 20000 ಕ್ಕೂ ಹೆಚ್ಚು ಸಂಘಗಳಲ್ಲಿ 40000 ಕ್ಕೂ ಅಧಿಕ ಸಿಬ್ಬಂಧಿಗಳು ಪ್ರತಿ ನಿತ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಹಾಲು ಉತ್ಪಾದಕರ ಸಂಘಗಳಲ್ಲಿರುವ ಚುನಾಯಿತ ಪ್ರತಿನಿಧಿಗಳು ಅವರಿಗೆ ಇಂತಿಷ್ಟು ಸಂಬಳ ಎಂಬಂತೆ ಅಲ್ಲಿನ ಹಾಲು ಉತ್ಪಾದನೆ ಶೇಖರಣೆಯ ಮೇಲೆ ನಿಧರ್ಾರವಾಗುತ್ತಿದೆ. ಆದರೆ ಹಾಲು ಉತ್ಪಾದಕರ ಸಂಘಗಳಲ್ಲಿ ಕಾರ್ಯದಶರ್ಿಗಳಿಗೆ ಕೇವಲ ಸಂಘದ ಸಮಯದಲ್ಲಷ್ಟೇ ಅಲ್ಲದೇ ಸಂಘದ ದಿನನಿತ್ಯದ ಲೆಕ್ಕಪತ್ರಗಳ ಜೊತೆ ಸರಕಾರದ 5 ರೂ ಪ್ರೋತ್ಸಾಹಧನಕ್ಕೂ ಪ್ರತಿ ಮಾಹೆ ಉತ್ಪಾದಕನ ಮಾಹಿತಿ ಸಲ್ಲಿಸುವುದು, ಸಂಬಂಧಪಟ್ಟ ಒಕ್ಕೂಟಕ್ಕೆ ಲೆಕ್ಕ ನೀಡುವದು. ಉತ್ಪಾದಕರ ಹಾಲಿಗೆ ಹಣವನ್ನು ಬ್ಯಾಂಕುಗಳ ಮೂಲಕ ಉತ್ಪಾದಕರ ಖಾತೆಗೆ ವಗರ್ಾವಣೆ ಮಾಡುವದು. ಪಶು ಆಹಾರವನ್ನು ರೈತರಿಗೆ ಹಂಚಿಕೆ ಮಾಡುವದು, ಸಹಕಾರ ಇಲಾಖೆಗೆ ಪ್ರತಿ ತಿಂಗಳ ಲೆಕ್ಕ ಕೊಡುವದು, ಒಕ್ಕೂಟದ ಅಧಿಕಾರಿಗಳು ತಪಾಸಣೆ ಬಂದಾಗ ಸಹಕರಿಸುವದು, ಪಶು ಸಂಗೋಪನೆ ಇಲಾಖೆಯವರು ಬಂದಾಗ ಪಶು ವೈದ್ಯರ ಸಹಾಯದೊಂದಿಗೆ ಲಸಿಕೆ ಹಾಕುವದು,ಕೃತಕ ಗರ್ಭಧಾರಣೆ ಮಾಡಿಸುವದು ಸೇರಿದಂತೆ ಇತರ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಹೀಗಾಗಿ ಈ ಎಲ್ಲ ಕೆಲಸಗಳನ್ನು ನಿರ್ವಹಿಸಲು ಕೇವಲ ಸಂಘದ ಸಮಯದಷ್ಟೇ ಅಲ್ಲದೇ ದಿನದಲ್ಲಿ 7 ರಿಂದ 8 ಘಂಟೆಗಳ ಅವಧಿ ಬೇಕಾಗುತ್ತದೆ. ಇದರಿಂದಾಗಿ ಅವರ ಹೆಚ್ಚಿನ ಸಮಯವನ್ನು ಮೀಸಲಿಡಬೇಕಾಗುತ್ತದೆ. ಇದರಿಂದಾಗಿ ಅವರಿಗೆ ಸಂಘದಿಂದ ನೀಡುವ ವೇತನ ಜೀವನ ನಿರ್ವಹಣೆಗೆ ಸಾಲುವದಿಲ್ಲಾ.
ಈ ಹಿಂದೆ 2014-15 ನೇ ಸಾಲಿನಲ್ಲಿ ಸಕರ್ಾರ ರಾಜ್ಯದ ಎಲ್ಲಾ ಹಾಲು ಉತ್ಪಾದಕರ ಸಂಘಗಳ ಸಿಬ್ಬಂಧಿಗಳಿಗೆ ಪ್ರತಿ ಲೀಟರಿಗೆ .20 ಪೈಸೆಯಂತೆ ನೀಡಿರುತ್ತದೆ. ಅದರಂತೆ ಪ್ರತಿ ಸಲದ ಬಜೆಟನಲ್ಲಿ 2015-16 ನೇ ಸಾಲಿನಿಂದ ಪ್ರಸ್ತುತ ವರ್ಷದವರೆಗೆ ಸಿಬ್ಬಂಧಿಗಳಿಗೆ ಪ್ರೋತ್ಸಾಹಧನ ನೀಡುವ ಅಂಶವನ್ನು ಸೇರಿಸಿಕೊಳ್ಳಬೇಕಾಗಿದೆ ಮತ್ತು ಸಂಘದ ಕಾರ್ಯದಶರ್ಿಗಳಿಗೆ ಕನಿಷ್ಠ ವೇತನವನ್ನಾದರು ಸಕರ್ಾರ ನೀಡಿದರೆ ಆ ಕುಟುಂಕ್ಕೆ ಜೀವನ ಭದ್ರತೆ ಒದಗಿಸಿಕೊಟ್ಟಂತಾಗುತ್ತದೆ. ಇಂದು ಕನರ್ಾಟಕದಲ್ಲಿ ಸಂಘಗಳಿಗೆ ಪೂರೈಸುವ ಗುಣಮಟ್ಟದ ಪ್ರತಿ ಲೀಟರ್ ಹಾಲಿಗೆ 5 ರೂ. ನೀಡಿ ಸಂಕಷ್ಟದಲ್ಲಿದ್ದ ಹಾಲು ಉತ್ಪಾದಕ ರೈತರ ಮೆಚ್ಚುಗೆಗೆ ಪಾತ್ರರಾಗಿದ್ದಿರಿ, ಆದರೆ ಸರಕಾರದ ಈ ಯೋಜನೆಯ ಜೊತೆಗೆ ಇತರ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ಮುಟ್ಟಿಸುವಲ್ಲಿ ಹಳ್ಳಿಗಳಲ್ಲಿರುವ ಹಾಲಿನ ಸಂಘಗಳ ಸಿಬ್ಬಂಧಿಗಳ ಶ್ರಮವೇ ಕಾರಣವಾಗಿರುತ್ತದೆ. ಇಂತಹ ಯೋಜನೆಗಳನ್ನು ಯಶಸ್ವಿಗೊಳಿಸಲು ಹಳ್ಳಿಗಳಲ್ಲಿರುವ ಸಂಘಗಳೆ ಮೂಲ ಆದಾರ ಸ್ತಂಭದಂತೆ ಕಾರ್ಯ ನಿರ್ವಹಿಸುತ್ತಿರುವದರಿಂದ ಅಲ್ಲಿನ ಸಿಬ್ಬಂಧಿಗಳ ಹಿತ ರಕ್ಷಣೆ ಕಾಪಾಡುವದು ದೊಡ್ಡ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ