ಮಳೆ ನೀರು ಕೊಯ್ಲು ಮಾಹಿತಿ ಕಾರ್ಯಾಗಾರ

ಶಿರಸಿ :

ಶಿರಸಿ ತಾಲೂಕಾ ಪಂಚಾಯತ ಮತ್ತು ಜಲಭಾರತಿ ಶಿರಸಿರವರು ಒಂದು ಹೆಜ್ಜೆ ಜಲಜಾಗ್ರತಿಯೆಡೆಗೆ ಅಭಿಯಾನದಡಿಯಲ್ಲಿ ಮಳೆನೀರು ಕೊಯ್ಲು ಮಾಹಿತಿ ಕಾರ್ಯಾಗಾರವನ್ನು ಬಿಸಲಕೊಪ್ಪ ಪಂಚಾಯತ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕಾ ಪಂಚಾಯತ ಉಪಾಧ್ಯಕ್ಷರಾದ ಚಂದ್ರು ದೇವಡಿಗ ಎಸಳೆ ಮಳೆಗಾಲದಲ್ಲಿ ಈ ಭಾಗದಲ್ಲಿ ಸುಮಾರು 2500ಮೀ.ಲೀ ರಿಂದ 2800 ಮೀ.ಲೀ. ಮಳೆ ಬೀಳುತ್ತದೆ. ಅಷ್ಟು ನೀರು ವ್ಯರ್ಥವಾಗಿ ಎಲ್ಲೋ ಒಂದು ಕಡೆ ಸಮುದ್ರ ಸೇರುತ್ತದೆ. ಈಗಿನ ಅರಣ್ಯ ನಾಶದ ಪರಿಣಾಮದಿಂದ ಮಳೆ ನೀರು ಭೂಮಿಯಲ್ಲಿ ಇಂಗುವುದಕ್ಕೆ ಅವಕಾಶವಿಲ್ಲದಂತಾಗಿದ್ದು ನೀರು ಭೂಮಿಯೊಳಗೆ ಇಂಗದೇ ಅಂತರ್ಜಲ ಬರಿದಾಗುತ್ತಿದೆ. ಆ ನಿಟ್ಟಿನಲ್ಲಿ ನಾವುಗಳು ಮಳೆ ನೀರನ್ನು ಭೂಮಿಗೆ ಇಂಗಿಸುವ ಕಾರ್ಯ ಮಾಡಬೇಕಾಗಿದೆ ಎಂದರು.

ಗ್ರಾಮ ಪಂಚಾಯತ ವ್ಯಾಪ್ತಿಯ ಮಳೆ ನೀರು ಕೊಯ್ಲು ಮಾಡಲು ನರೇಗಾದಲ್ಲಿ ಹಣಕಾಸು ವ್ಯವಸ್ಥೆ ಕೂಡ ಇದ್ದು ಸಾರ್ವಜನಿಕರು ಅದರ ಉಪಯೋಗ ಪಡೆದು ತಮ್ಮ-ತಮ್ಮ ಮನೆಯ ಛಾವಣೆಯ ನೀರನ್ನು ಇಂಗಿಸುವ ಪ್ರಯತ್ನಿಸಬೇಕೆಂದರು. ವೇದಿಕೆಯಲ್ಲಿ ತಾಲೂಕಾ ಪಂಚಾಯತ ಸದಸ್ಯರಾದ ಲತಾ ರವಿ ನಾಯ್ಕ, ವಿ.ಎಸ್.ಎಸ್ ಅಧ್ಯಕ್ಷರಾದ ಎಸ್.ಎನ್ ಭಟ್ಟ ಹೈಸ್ಕೂಲ್ ಆಡಳಿತ ಸಮಿತಿ ಅಧ್ಯಕ್ಷರಾದ ಎಸ್.ಎನ್.ಭಟ್ಟ , ತಾಲೂಕಾ ಕೆ.ಡಿ.ಪಿ ಸದಸ್ಯರಾದ ಬಿ.ಎಸ್.ಗಂಗಾಧರ, ಗ್ರಾಮ ಪಂಚಾಯತ ಅಧ್ಯಕ್ಷರಾದ ರೇಖಾ ಭಟ್ಟ, ನ್ಯಾಯವಾದಿಗಳಾದ ಗಣಪತಿ ಹೆಗಡೆ ಗ್ರಾಮ ಪಂಚಾಯತ ಸರ್ವ ಸದಸ್ಯರು ಸಾರ್ವಜನಿಕರು ಭಾಗವಹಿಸಿದ್ದರು.

ಗ್ರಾಮ ಪಂಚಾಯತ ಪ್ರಭಾರ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಸಿ ಎಸ್ ಹೆಗಡೆರವರು ನಿರ್ವಹಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ