ಖೊಟ್ಟಿಪೈಸೆ ಚಲನಚಿತ್ರ ಜುಲೈನಲ್ಲಿ ಬಿಡುಗಡೆ

ಗದಗ-ಜೂ-24: ನಾಯಕ ನಟ ರಾಮ ಚೇತನ ಹಾಗೂ ಹಿರಿಯ ಕಲಾವಿದ ವೈಜನಾಥ ಬಿರಾದಾರ ಅಭಿನಯದ “ಖೊಟ್ಟಿಪೈಸೆ” ಚಲಚಿತ್ರ ಜುಲೈ ತಿಂಗಳಲ್ಲಿ ತೆರೆಕಾಣಲಿದೆ ಎಂದು ನಿರ್ದೇಶಕ ಆರ್.ಕೆ.ಕಿರಣ್ ಹೇಳಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಚಲಾವಣೆಯಲ್ಲಿದ್ದ ಐದು ಹಾಗೂ ಹತ್ತು ಪೈಸೆ ಹಳೆಯ ನಾಣ್ಯಗಳ ಮೌಲ್ಯ, ಅದರ ಬಳಕೆ ಮುಂದಿಟ್ಟುಕೊಂಡು ಚಲಚಿತ್ರ ರಚೆನೆಯಾಗಿದೆ. “ಖೊಟ್ಟಿಪೈಸೆ” ಅರ್ಥ ಮೌಲ್ಯ ಕಳೆದುಕೊಂಡ ನಾಣ್ಯ. ಹೀಗಾಗಿ ಈ ಚಿತ್ರದಲ್ಲಿ ಮನುಷ್ಯನಿಗೂ ಹಾಗೂ ಖೊಟ್ಟಿ ನಾಣ್ಯಕ್ಕೂ ಇರುವ ವ್ಯತ್ಯಾಸ ಮತ್ತು ಸಂಬಂಧ ಕಲ್ಪಿಸಲಾಗಿದೆ. ಅಲ್ಲದೇ ನಾಯಕ ರಾಮ ಚೇತನ, ನಟಿ ಸಹನಾ ಹೊರತುಪಡಿಸಿ ಉಳಿದಂತೆ ನಿರ್ಮಾಪಕಿ ಗಿರಿಜಾ ಕುಮಾರಿ ಸೇರಿದಂತೆ ಎಲ್ಲ ಕಲಾವಿದರು ಉತ್ತರ ಕರ್ನಾಟಕದವರೇ ಇದ್ದಾರೆ.

ಜತೆಗೆ ಚಿತ್ರಿಕರಣ ಸಹ ಉತ್ತರ ಕರ್ನಾಟಕದ ಗದಗ, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಚಿತ್ರಿಕರಿಸಲಾಗಿದೆ. ರಾಜ್ಯಾದ್ಯಂತ ಸುಮಾರ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿರುವ ಚಲನಚಿತ್ರದಲ್ಲಿ ಕಮರ್ಷಿಯಲ್ ಗಿಂತ ಹೆಚ್ಚಾಗಿ ಮನೋರಂಜನೆಗೆ ಅವಕಾಶ ಕಲ್ಪಿಸಲಾಗಿದೆ. ಹೊಸ ಕಲಾವಿದರಿರುವ ಖೊಟ್ಟಿಪೈಸೆ ಚಲನಚಿತ್ರವನ್ನು ನಾಡಿನ ಸಮಸ್ತ ಜನತೆ ನೋಡಿ ಪ್ರೋತ್ಸಾಹಿಸಬೇಕು ಎಂದ್ರು.

Kottipaise,film, release on july

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ