`ಕೆ ಎ ಬಾರ್ ಕೆ ಎಲ್` ಚಿತ್ರ ಆರಂಭ

ಜಾಜಿ ಪ್ರೊಡಕ್ಷನ್‍ಲಾಂಛನದಲ್ಲಿ ಪ್ರಜ್ವಲ್ ಎಂ ರಾಜ ಅವರು ನಿರ್ಮಿಸುತ್ತಿರುವ `ಕೆ ಎ ಬಾರ್ ಕೆ ಎಲ್` ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಜಯನಗರದ ವಿನಾಯಕ ದೇವಸ್ಥಾನದಲ್ಲಿ ನೆರವೇರಿತು. ನಿರ್ಮಾಪಕರ ತಂದೆ ವಿ.ಎಲ್.ಮುನಿರಾಜ ಅವರು ಆರಂಭ ಫಲಕ ತೊರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.

`ರಣತಂತ್ರ` ಹಾಗೂ `ನಿನ್ನ ಕಣ್ಣ ನೋಟದಲ್ಲಿ` ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಅನುಭವವಿರುವ ಯಶಸ್ವಿ ಬಾಲಾದಿತ್ಯ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಹಲವು ಕಿರುಚಿತ್ರಗಳಿಗೆ ಹಾಗೂ ಇಂಗ್ಲೀಷ್ ಮ್ಯೂಸಿಕ್ ವಿಡಿಯೋಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಯಶಸ್ವಿ ಬಾಲಾದಿತ್ಯ ಅವರೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದಿದ್ದಾರೆ.

ಮೇ 18ರಿಂದ ಚಿತ್ರದ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದೆ. ಕನಕಪುರ, ಬೆಂಗಳೂರು, ಕೇರಳ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಚೇತನ್‍ಕುಮಾರ್ ಸಂಗೀತ ನಿರ್ದೇಶನ ಹಾಗೂ ತನ್ವಿಕ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಸುಜೀತ್ ರಾಥೋಡ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿಯಾಗಿ ನಿತ್ಯ ಅಭಿನಯಿಸುತ್ತಿದ್ದಾರೆ. ಹಿರಿಯ ನಟಿ ಸುಧಾರಾಣಿ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ