ಸೇಂಟ್ ಪೀಟರ್ಸ್ ಬರ್ಗ್: 21ನೇ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಕೋಸ್ಟರಿಕಾ ವಿರುದ್ಧ ಬ್ರೆಜಿಲ್ ತಂಡ 2-0 ಗೋಲುಗಳಿಂದ ಭರ್ಜರಿ ಗೆಲುವು ದಾಖಲಿಸಿದೆ
ತೀವ್ರ ಹಣಾಹಣಿಯಿಂದಾಗಿ ಪಂದ್ಯದ ನಿಗದಿ 90 ನಿಮಿಷಗಳವರೆಗೂ ಯಾವುದೇ ಗೋಲು ಕಾಣದ ಬ್ರೆಜಿಲ್, ಹೆಚ್ಚುವರಿ ಸಮಯದಲ್ಲಿ ಆಕ್ರಮಣಕಾರಿ ಆಟಗಾರ ನೇಮಾರ್ ಮತ್ತು ಫಿಲಿಪ್ ಕೌಟಿನ್ಹೊ ಗಳಿಸಿದ ಗೋಲುಗಳಿಂದ ಗೆಲುವಿನ ನಗೆ ಬೀರಿತು.
ಬಲಿಷ್ಠ ಬ್ರೆಜಿಲ್ ತಂಡಕ್ಕೆ ಕೋಸ್ಟರಿಕಾ ತಂಡ ಸಹ ಭಾರಿ ಪೈಪೋಟಿ ನೀಡಿತು. ಯಾವುದೇ ಕ್ಷಣದಲ್ಲಿಯೂ ಬ್ರೆಜಿಲ್ ತಂಡ ಕೋಟೆಯನ್ನು ಭೇದಿಸಲು ಅವಕಾಶ ನೀಡಲಿಲ್ಲ.
ಕೋಸ್ಟರಿಕಾದ ರಕ್ಷಣಾ ಕೋಟೆಯನ್ನು ಮುನ್ನುಗ್ಗಿ ಸಾಗಲು ಬ್ರೆಜಿಲ್ ತಂಡದ ಆಟಗಾರರು ನಡೆಸಿದ ಪ್ರಯತ್ನವೆಲ್ಲ ವ್ಯಥ್ಯವಾಗಿತ್ತು. 90 ನಿಮಿಷಗಳ ಆಟದಲ್ಲಿ ಚೆಂಡು ಹೆಚ್ಚು ಹೊತ್ತು ಬ್ರೆಜಿಲ್ ಆಟಗಾರರ ಬಳಿಯೇ ಇತ್ತು. ಕೋಸ್ಟರಿಕಾ ಕೋಟೆಯಲ್ಲಿ ಲಗ್ಗೆ ಹಾಕಿದರೂ ಚೆಂಡು ಮಾತ್ರ ಗೋಲು ಬಲೆ ಮುಟ್ಟಲಿಲ್ಲ.