ಚಿಕ್ಕಮಗಳೂರು:ಜೂ-19; ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿ ಓರ್ವ ಸಜೀವ ದಹನವಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ನಡೆದಿದೆ.
ಕಡೂರು ತಾಲೂಕಿನ ಗಿರಿಯಾಪುರದಲ್ಲಿ ಈ ಅವಘಡ ಸಂಭವಿಸಿದ್ದು ಘಟನೆಯಿಂದ ಟ್ಯಾಂಕರ್ ಹಾಗೂ ಹದಿನೈದು ಮನೆಗಳಿಗೆ ಬೆಂಕಿ ತಗುಲಿದೆ. ಅಪಘಾತಕ್ಕೀಡಾದ ಟ್ಯಾಂಕರ್ ಸುತ್ತ ಸುಮಾರು 100 ಮೀ. ವರೆಗೆ ಬೆಂಕಿಯ ಕೆನ್ನಾಲಿಗೆ ಆವರಿಸಿದೆ.
ಘಟನಾ ಸ್ಥಳಕ್ಕೆ ಐದಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಆಗಮಿಸಿ ಬೆಂಕಿ ನಂದಿಸಲು ಹರ ಸಾಹಸ ಪಡುತ್ತಿದೆ.
ಟ್ಯಾಂಕರ್ ಕಡೂರಿನಿಂದ ಹೊಸದುರ್ಗದ ಕಡೆ ಸಾಗುತ್ತಿತ್ತು. ಗಿರಿಯಾಪುರಕ್ಕೆ ಸಮೀಪಿಸಿದ್ದ ಟ್ಯಾಂಕರ್ ರಸ್ತೆ ತಿರುವಿನಲ್ಲಿ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಬಿದ್ದ ರಭಸಕ್ಕೆ ಬೆಂಕಿ ಆವರಿಸಿಕೊಂಡಿದೆ.
Fuel tanker,Fire accident,chikkamagalore