ನಕಲಿ ಅಕಾರಿ ಬಂಧನ: 2.50 ಕೋಟಿ ರೂ.ವಶ

ಚಿಕ್ಕಮಗಳೂರು: ತಾನು ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮಂಡಳಿಯ ಉನ್ನತಾಕಾರಿ ಎಂದು ಹೇಳಿ, ಸರ್ಕಾರಿ ನೌಕರಿ ಕೊಡಿಸುವುದಾಗಿ ವಿವಿಧ ಜಿಲ್ಲೆಗಳ ಸುಮಾರು 31 ಜನರಿಂದ ಕೋಟ್ಯಂತರ ರೂ. ಪಡೆದು ವಂಚಿಸಿದ್ದ ವ್ಯಕ್ತಿಯನ್ನು ನಗರ ಠಾಣೆ ಪೊಲೀಸರು ಬಂಸಿದ್ದಾರೆ.
ಬೆಂಗಳೂರಿನ ನಾಗರಬಾವಿಯ ಭೈರವೇಶ್ವರ ನಗರದ ನಿವಾಸಿ ಪ್ರಭಾಕರ ಪ್ರಮುಖ ಆರೋಪಿ. ಆತನೊಂದಿಗೆ ಆತನ ಕಾರು ಚಾಲಕ ಶಿವರಾಜ್‍ನನ್ನು ಸಹ ಪೊಲೀಸರು ಬಂಸಿದ್ದಾರೆ. ಆರೋಪಿಯು ಸುಮಾರು 2.50 ಕೋಟಿ ರೂ.ಗೂ ಹೆಚ್ಚು ಹಣಕ್ಕೆ ಪಂಗನಾಮ ಹಾಕಿದ್ದಾನೆ ಎಂದು ಎಸ್‍ಪಿ ಎಂ.ಎಚ್.ಅಕ್ಷಯ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ದೂರು ನೀಡಿದ್ದ ಉಮೇಶ್:
ಚಿಕ್ಕಮಗಳೂರು ನಗರ ಹೋಟೆಲ್‍ವೊಂದರಲ್ಲಿ ಕೆಲಸ ಮಾಡುವ ಚಿಕ್ಕಗೌಜದ ಉಮೇಶ್ ಎಂಬುವವರು ನೀಡಿದ ದೂರಿನ ಮೇರೆಗೆ ಈ ಬೃಹತ್ ಜಾಲ ಬೆಳಕಿಗೆ ಬಂದಿದೆ. ಪ್ರಭಾಕರ್ ಎಸ್‍ಎಸ್‍ಎಲ್‍ಸಿ ಬೋರ್ಡ್‍ನಲ್ಲಿ ಕೆಲಸ ಕೊಡಿಸುವುದಾಗಿ 2 ಲಕ್ಷ ರೂ. ಮುಂಗಡ ಪಡೆದಿದ್ದ. ಕೆಲವು ದಿನಗಳ ನಂತರ ಅನುಮಾನಗೊಂಡ ಉಮೇಶ ಎಸ್‍ಎಸ್‍ಎಲ್‍ಸಿ ಬೋರ್ಡ್‍ನಲ್ಲಿ ವಿಚಾರ ಮಾಡಿದಾಗ ಪ್ರಭಾಕರ ಎನ್ನುವ ವ್ಯಕ್ತಿ ಅಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಗೊತ್ತಾಗಿದೆ. ತಕ್ಷಣವೇ ನಗರ ಪೊಲೀಸರಿಗೆ ದೂರು ನೀಡಿದ್ದರು. ನಗರ ಪೊಲೀಸ್ ಠಾಣಾಕಾರಿ ಟಿ.ಐ.ತೇಜಸ್ವಿ, ಎಎಸ್‍ಐ ರಮೇಶ್, ದಯಾನಂದ್, ಲೋಹಿತ್, ಶಶಿಧರ್, ನವೀನ್, ಮಧುಕುಮಾರ್, ಗುರುಪ್ರಸಾದ್, ಎಚ್.ಯು. ಮೇಘಾ ಅವರನ್ನೊಳಗೊಂಡ ವಿಶೇಷ ತಂಡ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ