ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂಗೆ ಮಧ್ಯಂತರ ನಿರೀಕ್ಷಣಾ ಜಾಮೀನು

ಹೊಸದಿಲ್ಲಿ,ಮೇ 30

ಏರ್ ಸೆಲ್-ಮ್ಯಾಕ್ಸಿಸ್ ಗೆ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ(ಎಫ್ಐಪಿಬಿ)ಯ ಅನುಮತಿ ಒದಗಿಸುವ ಹಗರಣದ ಪಿತ್ತೂರಿಯಲ್ಲಿ ಕೇಂದ್ರ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂಗೆ ಸಂಕಷ್ಟ ಎದುರಾಗಿದ್ದು ಈ ಸಂಬಂಧ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಚಿದಂಬಂರಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಕೋರ್ಟ್ ಜೂನ್ 5ರವರೆಗೆ ಚಿದಂಬರಂಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಮುಂದಿನ ವಿಚಾರಣೆ ಜೂನ್ 5ಕ್ಕೆ ಮುಂದೂಡಿದ್ದು ಅಂದು ಕೋರ್ಟ್ ಮುಂದೆ ಚಿದಂಬರಂ ಅವರನ್ನು ಹಾಜರುಪಡಿಸುವಂತೆ ಜಾರಿ ನಿರ್ದೇಶನಾಲಯಗೆ ಕೋರ್ಟ್ ಸೂಚಿಸಿದೆ.

ಏರ್ ಸೆಲ್ ಸಂಸ್ಥೆ 2006ರಲ್ಲಿ 3,500 ಕೋಟಿ ರುಪಾಯಿ ವಿದೇಶಿ ನೇರ ಹೂಡಿಕೆ(ಎಫ್​ಡಿಐ)ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಆದರೆ ಟೆಲಿಕಾಂ ಕಂಪನಿ ಕೇವಲ 180 ಕೋಟಿ ರುಪಾಯಿ ಎಫ್​ಡಿಐಗೆ ಅನುಮತಿ ಕೇಳಿದೆ ಎಂದು ನಮೂದಿಸುವ ಮೂಲಕ ಸಿಸಿಇಎಗೆ ಆ ಅರ್ಜಿ ರವಾನೆಯಾಗದಂತೆ ಹಣಕಾಸು ಸಚಿವಾಲಯ ನೋಡಿಕೊಂಡಿತ್ತು.

ಅಂದಿನ ನಿಯಮಾನುಸಾರ 600 ಕೋಟಿ ರುಪಾಯಿ ತನಕದ ಎಫ್​ಡಿಐಗೆ ಹಣಕಾಸು ಸಚಿವಾಲಯ ಎಫ್ಐಪಿಬಿ ಮೂಲಕ ಅನುಮತಿಸುವುದಕ್ಕೆ ಅಧಿಕಾರವಿತ್ತು. ಮಾಜಿ ಹಣಕಾಸು ಸಚಿವ ಚಿದಂಬರಂ ಪುತ್ರ ಕಾರ್ತಿಗೆ ಏರ್ ಸೆಲ್ ಕಂಪನಿ 26 ಲಕ್ಷ ರುಪಾಯಿಯನ್ನು ಪಾವತಿಸಿತ್ತು. ಈ ಪ್ರಕರಣವೀಗ ಅಕ್ರಮ ಹಣ ವರ್ಗಾವಣೆ ಕಾಯ್ದೆ(ಪಿಎಂಎಲ್ಎ) ಪ್ರಕಾರ ತನಿಖೆ ನಡೆಸುತ್ತಿದೆ

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ