ಇಂದು, ನಾಳೆ ಬ್ಯಾಂಕ್ ನೌಕರರ ಮುಷ್ಕರ: ಹಣಕಾಸು ವಹಿವಾಟಿನಲ್ಲಿ ವ್ಯತ್ಯಯ

ಹೊಸದಿಲ್ಲಿ,ಮೇ 30

ಇಂದು ಮತ್ತು ನಾಳೆ ಬ್ಯಾಂಕಿಂಗ್ ವಹಿವಾಟಿನಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಭಾರತೀಯ ಬ್ಯಾಂಕ್ ನೌಕರರ ಸಂಘದ ಕನಿಷ್ಠ ವೇತನ ಪರಿಷ್ಕರಣೆ ಪ್ರಸ್ತಾಪ ಖಂಡಿಸಿ ಇಂದು ನಾಳೆz ಸಾರ್ವಜನಿಕ ವಲಯದ ಬ್ಯಾಂಕ್​ಗಳ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ. ಸಾರ್ವಜನಿಕ ವಲಯದ ಬ್ಯಾಂಕ್​ಗಳ ಒಕ್ಕೂಟ ಯುನೈಟೇಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಬಂದ್​ಗೆ ಕರೆ ನೀಡಿದೆ.
ಮೇ 5 ರಂದು ನಡೆದ ಸಭೆಯಲ್ಲಿ ಶೇ.2ರಷ್ಟು ವೇತನ ಹೆಚ್ಚಳಕ್ಕೆ ಭಾರತೀಯ ಬ್ಯಾಂಕ್ ನೌಕರರ ಸಂಘ ಪ್ರಸ್ತಾಪ ಇಟ್ಟಿತ್ತು. ಬ್ಯಾಂಕ್ ಯೂನಿಯನ್​ಗಳು ಈ ಪ್ರಸ್ತಾಪವನ್ನ ಸಾರಸಗಟಾಗಿ ತಿರಸ್ಕರಿಸಿದ್ದವು. ಆ ಬಳಿಕ ನಡೆದ ಹಲವು ಸಂಧಾನ ಮಾತುಕತೆಗಳೂ ಫಲ ನೀಡಿರಲಿಲ್ಲ. ಇದರ ಜೊತೆಗೆ ನೌಕರರ ಇತರೆ ಬೇಡಿಕೆಗಳಿಗೂ ಸಂಘ ಸ್ಪಂದಿಸುತ್ತಿಲ್ಲ ಎಂಬ ಆರೋಪ ಮುಂದಿಟ್ಟುಕೊಂಡು ಪ್ರತಿಭಟನೆಗೆ ಮುಂದಾಗಿದ್ದಾರೆ. .
ಈ ಕುರಿತಂತೆ ಚರ್ಚಿಸಲು ಮುಖ್ಯ ಕಾರ್ಮಿಕ ಆಯುಕ್ತರು ಕರೆ ನೀಡಿದ್ದ ಸಭೆ ಸಹ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿದೆ.
ಎಟಿಎಂ ಮತ್ತು ಬ್ಯಾಂಕ್ ವಹಿವಾಟಿನ ಮೇಲೆ ಪರಿಣಾಮ
ಬ್ಯಾಂಕ್ ನೌಕರರ ಮುಷ್ಕರದಿಂದಾಗಿ ಗ್ರಾಹಕರು ಅತಿಯಾಗಿ ಅವಲಂಬನೆಯಾಗಿರುವ ಎಟಿಎಂ ವಹಿವಾಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಣಕ್ಕಾಗಿ ಗ್ರಾಹಕರು ಎಟಿಎಂಗೆ ಮುಗಿಬೀಳಲಿದ್ದು, ಎಟಿಎಂಗೆ ತುಂಬುವ ವ್ಯವಸ್ಥೆ ಸ್ಥಗಿತಗೊಳ್ಳುವುದರಿಂದ ಜನ ಸಂಕಷ್ಟ ಎದುರಿಸಬೇಕಾಗುತ್ತದೆ.
ಸಾರ್ವಜನಿಕ ವಲಯದ 21 ಬ್ಯಾಂಕ್ ಮತ್ತು ಕೆಲ ಖಾಸಗಿ ಬ್ಯಾಂಕ್ ನೌಕರರು ಸೇರಿ ಸುಮಾರು 10 ಲಕ್ಷ ನೌಕರರು ಬಂದ್​ನಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ. ಶೇ. 75ರಷ್ಟು ಬ್ಯಾಂಕ್ ವಹಿವಾಟು ನಾಳೆ ಸ್ಥಗಿತಗೊಳ್ಳಲಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ