ಪಶ್ಚಿಮ ಬಂಗಾಳ ಪಂಚಾಯಿತಿ ಚುನಾವಣೆ: ಹಲವಾರು ಜಿಲ್ಲೆಗಳಲ್ಲಿ ವ್ಯಾಪಕ ಹಿಂಸಾಚಾರ

ಕೋಲ್ಕತಾ, ಮೇ 14- ಹಲವಾರು ಜಿಲ್ಲೆಗಳಲ್ಲಿ ವ್ಯಾಪಕ ಹಿಂಸಾಚಾರಗಳ ನಡುವೆ ಪಶ್ಚಿಮ ಬಂಗಾಳದಲ್ಲಿ ಇಂದು ಮಹತ್ವದ ಪಂಚಾಯಿತಿ ಚುನಾವಣೆ ನಡೆಯಿತು.
ರಾಜ್ಯ 20 ಜಿಲ್ಲೆಗಳ 621 ಜಿಲ್ಲಾ ಪರಿಷತ್‍ಗಳು, 6,157 ಪಂಚಾಯಿತಿ ಸಮಿತಿಗಳು ಹಾಗೂ 31,827 ಗ್ರಾಮ ಪಂಚಾಯಿತಿಗಳಿಗೆ ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಿತು. ವ್ಯಾಪಕ ಬಂದೋಬಸ್ತ್ ನಡುವೆಯೂ ಹಲವೆಡೆ ಹಿಂಸಾಚಾರ ಭುಗಿಲೆದ್ದು, ಪೆÇಲೀಸರೂ ಸೇರಿದಂತೆ ಹಲವರು ಗಾಯಗೊಂಡಿದ್ದು, ವಾಹನಗಳು ಜಖಂಗೊಂಡಿವೆ.
ಉತ್ತರ 24 ಪರಗಣ ಜಿಲ್ಲೆ, ದಕ್ಷಿಣ 24 ಪರಗಣ ಜಿಲ್ಲೆ, ಬುರ್ದ್‍ವಾನ್, ಕೂಚ್‍ಬೆಹರ್ ಜಿಲ್ಲೆಗಳ ವಿವಿಧೆಡೆ ಟಿಎಂಸಿ, ಬಿಜೆಪಿ, ಮತ್ತು ಸಿಪಿಎಂ ಕಾರ್ಯಕರ್ತರ ಗುಂಪುಗಳ ನಡುವೆ ಪ್ರತ್ಯೇಕ ಘರ್ಷಣೆಗಳು ನಡೆದು ಕಾರ್ಯಕರ್ತರು ಗಾಯಗೊಂಡಿದ್ದಾರೆ. ಪೆÇಲೀಸರಿಗೂ ಈ ಘಟನೆಗಳಲ್ಲಿ ಪೆಟ್ಟಾಗಿವೆ.
ಭದ್ರತೆಗಾಗಿ 60,000ಕ್ಕೂ ಹೆಚ್ಚು ಪೆÇಲೀಸರನ್ನು ನಿಯೋಜಿಸಿದ್ದರೂ, ಅಲ್ಲಲ್ಲಿ ಘರ್ಷಣೆ ಮತ್ತು ಹಿಂಸಾಚಾರಗಳು ಮರುಕಳಿಸಿವೆ.
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುನ್ನ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಕೊನೆಯ ಪ್ರಮುಖ ಚುನಾವಣಾ ಇದಾಗಿದೆ. ಇದನ್ನು 2019ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಅಭ್ಯಾಸ ಪಂದ್ಯ ಎಂದೇ ರಾಜಕೀಯ ಪಕ್ಷಗಳು ಬಣ್ಣಿಸಿವೆ.
ಒಂದೆ ಹಂತದಲ್ಲಿ ನಡೆಯುವ ಈ ಚುನಾವಣೆ ಆಡಳಿತರೂಢ ತೃಣಮೂಲ ಕಾಂಗ್ರೆಸ್, ಪ್ರತಿ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಎಡ ರಂಗಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಪಿ ಈಗಾಗಲೇ 20,000ಕ್ಕೂ ಹೆಚ್ಚು ಪಂಚಾಯಿತಿ ಸ್ಥಾನಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದೆ. ಇನ್ನುಳಿದ ಕ್ಷೇತ್ರಗಳಲ್ಲಿ ತೀವ್ರ ಪೈಪೆÇೀಟಿ ಎದುರಾಗಿದೆ. ಮೇ 17ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ರಾಜಕೀಯ ಸಂಘರ್ಷಕ್ಕೆ 66 ಬಲಿ :
ಪಂಚಾಯತಿ ಚುನಾವಣೆಗಳಿಗೆ ಮುನ್ನವೇ ಹಲವೆಡೆ ಹಿಂಸಾಚಾರ ಭುಗಿಲೆದ್ದಿದೆ. ಸೌತ್ 24 ಪರಗಣ ಜಿಲ್ಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯ ಬೆಂಬಲಿಗನೊಬ್ಬನ ಕೊಲೆ ಪ್ರಕರಣದ ಸಂಬಂಧ ತೃಣಮೂಲ ಕಾಂಗ್ರೆಸ್(ಟಿಎಂಸಿ) ಪ್ರಬಲ ನಾಯಕ ಅರಬುಲ್ ಇಸ್ಲಾಂರನ್ನು ಪೆÇಲೀಸರು ಬಂಧಿಸಿದ್ದಾರೆ.
ಚುನಾವಣಾ ಘೋಷಣೆಯಾದ ಬಳಿಕ ರಾಜ್ಯಾದ್ಯಂತ ಟಿಎಂಸಿ ಮತ್ತು ಬಿಜೆಪಿ ಮಧ್ಯೆ ನಡೆದ ರಾಜಕೀಯ ಸಂಘರ್ಷದಲ್ಲಿ ಎರಡೂ ಪಕ್ಷಗಳಿಗೆ ಸೇರಿದ 66ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎನ್ನಲಾಗಿದೆ. ನಮ್ಮ ಪಕ್ಷದ 14 ಮಂದಿ ಕೊಲೆಯಾಗಿದ್ದಾರೆ ಎಂದು ಟಿಎಂಸಿ ಆರೋಪಿಸಿದ್ದರೆ, ತಮ್ಮ ಪಕ್ಷದ 52 ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ