ಮಡಿಕೇರಿಯಲಲಿ ವಿವಾಹವಾದ ಹುಚ್ಚ ವೆಂಕಟ್

ಬೆಂಗಳೂರು, ಮೇ 13- ಪದೇ ಪದೇ ನನ್ನ ಎಕ್ಕಡ ಎನ್ನುತ್ತಾ ಪ್ರಸಕ್ತ ಚುನಾವಣೆಯಲ್ಲಿ ಪಾದರಕ್ಷೆ ಚಿಹ್ನೆಯಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹುಚ್ಚ ವೆಂಕಟ್‍ಗೆ ಮತ್ತೊಮ್ಮೆ ಕಂಕಣ ಬಲ ಕೂಡಿಬಂದಿದೆ.
ಹುಚ್ಚ ವೆಂಕಟ, ಪೆÇಕರಿ ಹುಚ್ಚ ವೆಂಕಟ ಎಂಬ ಚಿತ್ರಗಳಲ್ಲಿ ನಟಿಸಿರುವ ಹುಚ್ಚ ವೆಂಕಟ್ ಅವರು ತಮ್ಮ ಮುಂದಿನ ಚಿತ್ರವಾದ ಡಿಕ್ಟೇಟರ್ ಹುಚ್ಚ ವೆಂಕಟ್ ಎಂಬ ಸಿನಿಮಾ ಮಾಡುತ್ತಿದ್ದು ಆ ಚಿತ್ರದ ನಾಯಕಿ ಐಶ್ವರ್ಯಾ ಅವರನ್ನೇ ತಮ್ಮ ಬಾಳಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಮಡಿಕೇರಿಯಲ್ಲಿ ಹುಚ್ಚ ವೆಂಕಟ್ ಹಾಗೂ ಐಶ್ವರ್ಯಾ ಅವರ ವಿವಾಹ ನಡೆದಿದ್ದು , ಇದನ್ನು ಫೇಸ್ಬುಕ್ ಲೈವ್‍ನಲ್ಲಿ ಸ್ವತಃ ಹುಚ್ಚ ವೆಂಕಟ್ ಅವರೇ ಹೇಳಿಕೊಂಡಿದ್ದಾರೆ.
ಈ ಹಿಂದೆ ಹುಚ್ಚ ವೆಂಕಟ್ ಅವರು ರೇಷ್ಮಾ ಎಂಬುವವರನ್ನು ಮದುವೆಯಾಗಿದ್ದರು, ನಂತರ ಅವರಿಂದ ದೂರವಾಗಿದ್ದು, ಈಗ ಐಶ್ವರ್ಯಾ ಅವರನ್ನು ಮದುವೆಯಾಗಿದ್ದು ನಮ್ಮನ್ನು ದೂರ ಮಾಡಬೇಡಿ ಎಂದು ತಮ್ಮ ಕುಟುಂಬ ವರ್ಗದವರನ್ನು ಫೇಸ್‍ಬುಕ್‍ನಲ್ಲೇ ಕೋರಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ