ಸಕ್ಕರೆಯ ನಾಡು ಮಂಡ್ಯ ಜಿಲ್ಲೆಯಲ್ಲಿ ಅಚ್ಚರಿಯೊಂದಕ್ಕೆ ಸಾಕ್ಷಿಯಾಯ್ತು ರಾಜ್ಯ ವಿಧಾನಸಭೆ ಚುನಾವಣೆ

 

ಬೆಂಗಳೂರು, ಮೇ 13- ಇಡೀ ರಾಷ್ಟ್ರದ ಕುತೂಹಲ ಕೆರಳಿಸಿದ್ದ 2018ರ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಸಕ್ಕರೆಯ ನಾಡು ಮಂಡ್ಯ ಜಿಲ್ಲೆಯಲ್ಲಿ ಅದ್ಭುತವಾದ ಅಚ್ಚರಿಯೊಂದಕ್ಕೆ ಸಾಕ್ಷಿಯಾಯಿತು.
ಇದು ಬಹುತೇಕರ ಗಮನಕ್ಕೆ ಬಂದಿರಲಿಕ್ಕಿಲ್ಲ. ಆದರೆ, ಮಂಡ್ಯ ಜಿಲ್ಲೆಯ ಪೂರ್ವ ಇತಿಹಾಸ, ನಾಡಿ ಮಿಡಿತ ಬಲ್ಲವರಿಗೆ ಮಾತ್ರ ಇದೊಂದು ಕಾರಣಿಕವಾಗಿ ಭಾಸವಾಗಿರುವುದಂತೂ ಸತ್ಯ. ಅಂದಹಾಗೆ ಏನಿದು ಅಚ್ಚರಿ..!

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಿನ್ನೆ ಶನಿವಾರ ಮತದಾನದ ವೇಳೆ ಅನಿರೀಕ್ಷಿತವಾಗಿ ನಡೆದ ಘಟನೆ. ಅದು ಮೇಲ್ನೋಟಕ್ಕೆ ಸಾಧಾರಣವಾದ ಘಟನೆಯಂತೆ ಕಂಡರೂ ಘಟನೆಗೆ ಕಾರಣೀಭೂತರಾದ ಮಹಾತಾಯಿಯೊಬ್ಬರ ಒಡಲಾಳದ ಹಂಬಲವಿದ್ದು, ಕಾಳಜಿಯಿದೆ. ಮಂಡ್ಯ ಜಿಲ್ಲೆಯ ಭವಿಷ್ಯದ ಬಗೆಗಿನ ಚಿಂತನೆ ಎಂಬುದು ಅರಿವಾಗುತ್ತದೆ.

ಆ ಘಟನೆ ಹೀಗಿದೆ: ನಿನ್ನೆ ನಡೆದ ಮತದಾನದ ವೇಳೆ 87ರ ಇಳಿ ವಯಸ್ಸಿನ ಮಾತೆಯೊಬ್ಬರು ನಾಗಮಂಗಲದಲ್ಲಿ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು. ಇದರಲ್ಲೇನು ವಿಶೇಷ ಎಂದೆನಿಸಬಹುದು. ಅಲ್ಲೇ ಇರುವುದು ವಿಶೇಷ..! ಆ ತಾಯಿ ಹಾಕಿದ್ದು ಬರೀ ಮತವಲ್ಲ, ಇಡೀ ಮಂಡ್ಯ ಜಿಲ್ಲೆಗೆ ಒಬ್ಬ ದಕ್ಷ, ಧೀರ, ಧೀಮಂತ ನಾಯಕನನ್ನಾಗಿ ಹೊರಹೊಮ್ಮಲು ಹಾಡಿದ ನಾಂದಿ..!

ಹೌದು..! ಆ ಮಾತೆ ಮತ ಹಾಕಿದ್ದು ಕಾಂಗ್ರೆಸ್ ಅಭ್ಯರ್ಥಿ ಚಲುವರಾಯಸ್ವಾಮಿಗೆ..! ಆ ಪದ್ಮಮ್ಮ ಬೇರೆ ಯಾರೂ ಅಲ್ಲ, ಕರ್ನಾಟಕ ಕಂಡ ಮಹಾನ್ ಗಾಂಧಿವಾದಿ, ಸರಳ-ಸಜ್ಜನ, ಸ್ವಾಭಿಮಾನಿಯಾಗಿ ಬಾಳಿದ ಕರ್ನಾಟಕ ಗಾಂಧಿ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಹೋ.ಶ್ರೀನಿವಾಸಯ್ಯ ಅವರ ಸಹೋದರಿ. ಇವರು ವಾಸವಿರುವುದು ಮಂಡ್ಯದಲ್ಲಿ. ಇವರ ಮತವಿರುವುದು ನಾಗಮಂಗಲದಲ್ಲಿ. ಅಲ್ಲಿಂದ ತಮ್ಮ ಮಗನ ಸಹಾಯದಿಂದ ನಾಗಮಂಗಲಕ್ಕೆ ಬಂದು ಮತ ಚಲಾಯಿಸಿದ್ದು ವಿಶೇಷ.

ಅಂತಹ ವಿಶಿಷ್ಟ ನಾಯಕತ್ವವನ್ನು ನಾನಿಂದು ಚಲುವರಾಯಸ್ವಾಮಿಯವರಲ್ಲಿ ಕಂಡೆ. ಹಾಗಾಗಿ ಚಲುವರಾಯಸ್ವಾಮಿ ಅವರನ್ನು ಗೆಲ್ಲಿಸಬೇಕೆಂದು ಹಾರೈಸುತ್ತ ನಾನು ಅವರಿಗೆ ಮತ ಹಾಕುತ್ತಿದ್ದೇನೆ. ನಾನು ವೋಟು ಮಾಡುತ್ತಿರುವುದು ಇದೇ ಪ್ರಥಮ. ಅವರು ಗೆಲ್ಲಬೇಕೆಂಬ ಹಂಬಲ ನನ್ನದು ಎಂಬ ತಮ್ಮ ಮನದಾಸೆ ವ್ಯಕ್ತಪಡಿಸಿದರು.
ಇದೇ ರೀತಿ ಬೇರೆ ಬೇರೆ ಕಡೆ ವಾಸವಿರುವ ಸಾಕಷ್ಟು ಹಿರಿಯರು, ವಿದ್ಯಾವಂತರು, ಯುವಕರು ಸ್ವಯಂಪ್ರೇರಿತರಾಗಿ ಬಂದು ಮತ ಚಲಾಯಿಸಿದ್ದಾರೆ. ಹಾಗಾಗಿ ಈ ನಾಗಮಂಗಲದಲ್ಲಿ ದಾಖಲೆ ಪ್ರಮಾಣದ ಮತದಾನವಾಗಿದೆ. ಕಾರಣ ತಟಸ್ಥ ಮತದಾರರೆಲ್ಲ ಮತದಾನ ಮಾಡಿದ್ದಾರೆ. ಪದ್ಮಮ್ಮ ಅವರ ರೀತಿ ಸಾಕಷ್ಟು ಮತದಾರರು ಮತದಾನ ಮಾಡಿರುವುದರಿಂದ ಮಂಡ್ಯ ಜಿಲ್ಲೆ ನಾಗಮಂಗಲದ ಮತದಾನ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ