ಮೈಸೂರು ಜಿಲ್ಲೆಯಲ್ಲಿ ಶೇ.74.60ರಷ್ಟು ದಾಖಲೆ ಮತದಾನ:

ಮೈಸೂರು, ಮೇ 13-ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ ಜಿಲ್ಲೆಯಲ್ಲಿ ದಾಖಲೆ ಮತದಾನವಾಗಿದೆ.  ಮೈಸೂರು ಜಿಲ್ಲೆಯಲ್ಲಿ ಶೇ.74.60ರಷ್ಟು ಮತದಾನವಾಗಿದ್ದು, ಅತಿ ಹೆಚ್ಚು ಮತದಾನ ಜಿಲ್ಲೆಯ ಪಿರಿಯಾಪಟ್ಟಣದಲ್ಲಿ (84.98), ಅತಿ ಕಡಿಮೆ ಮತದಾನ ಕೆ.ಆರ್.ಕ್ಷೇತ್ರದಲ್ಲಿ (58.86) ನಡೆದಿದೆ. 24 ಲಕ್ಷದ 93 ಸಾವಿರದ 407 ಮಂದಿ ಮತದಾರರ ಪೈಕಿ 18,60,081 ಮಂದಿ ಮತದಾರರು ಹಕ್ಕು ಚಲಾಯಿಸಿದ್ದಾರೆ.
ಕಳೆದ 20130 ಚುನಾವಣೆಗಿಂತ ಈ ಬಾರಿ ಅಧಿಕ ಮತದಾನವಾಗಿದ್ದು, ಶೇ.3ರಷ್ಟು ಹೆಚ್ಚು ಮತದಾನವಾಗಿದೆ. ಕಳೆದ ಬಾರಿ 71.15ರಷ್ಟು ಮತದಾನವಾಗಿತ್ತು.
ಕೃಷ್ಣರಾಜ-ಶೇ.58.86, ಚಾಮರಾಜ ಶೇ.59.18, ನರಸಿಂಹರಾಜ 61.43, ಚಾಮುಂಡೇಶ್ವರಿ ಶೆ.75.52, ಟಿ.ನರಸೀಪುರ-ಶೇ.78.08, ನಂಜನಗೂಡು 77.76, ಎಚ್.ಡಿ.ಕೋಟೆ ಶೇ.71.01, ಹುಣಸೂರು 82.73, ಕೆ.ಆರ್.ನಗರ 84.43, ವರುಣಾ ಶೇ.78.59 ಹಾಗೂ ಪಿರಿಯಾಪಟ್ಟಣದಲ್ಲಿ ಶೇ.84.98 ರಷ್ಟು ಮತದಾನವಾಗಿದೆ.
ನಿನ್ನೆ ನಡೆದ ಮತದಾನದ ನಂತರ ಎಲ್ಲಾ ಮತಯಂತ್ರಗಳನ್ನು ನಗರಕ್ಕೆ ತರಲಾಗಿದ್ದು ಎರಡು ಸ್ಥಳಗಳಲ್ಲಿ ಮತಯಂತ್ರಗಳನ್ನು ಇರಿಸಲಾಗಿದೆ. ಮಹಾರಾಣಿ ವಾಣಿಜ್ಯ ಕಾಲೇಜಿನಲ್ಲಿ 7 ಕ್ಷೇತ್ರಗಳ ಮತಯಂತ್ರಗಳು ಹಾಗೂ ಕೂರ್ಗಳ್ಳಿಯಲ್ಲಿರುವ ಎನ್‍ಐಇ ಕಾಲೇಜಿನಲ್ಲಿ 4 ಕ್ಷೇತ್ರಗಳ ಮತಯಂತ್ರಗಳನ್ನು ಬಿಗಿ ಭದ್ರತೆಯೊಂದಿಗೆ ಇರಿಸಲಾಗಿದೆ.
ಈ ಎರಡೂ ಸ್ಥಳಗಳಲ್ಲಿಯೂ ಭದ್ರತೆಗಾಗಿ ಅರೆಸೇನಾ ಪಡೆಯನ್ನು ನಿಯೋಜಿಸಲಾಗಿದೆ.
ಎರಡೂ ಕೇಂದ್ರಗಳಲ್ಲಿ ಮೇ 15 ರಂದು ನಡೆಯುವ ಮತ ಎಣಿಕೆಗಾಗಿ ಎಲ್ಲಾ ರೀತಿಯ ಸಿದ್ಧತೆಯನ್ನು ಜಿಲ್ಲಾಡಳಿತ ಮಾಡಿದೆ.
ಪ್ರತಿ ಕ್ಷೇತ್ರಕ್ಕೆ 14 ಟೇಬಲ್‍ಗಳು ಸಿದ್ಧಪಡಿಸಿ, ಮೀಡಿಯಾಸೆಂಟರ್, ಸರ್ವರ್‍ರೂಮ್, ವೀಕ್ಷಕರ ಕೊಠಡಿ, ಆರೋಗ್ಯ ಘಟಕಗಳನ್ನು ಸಹ ಸ್ಥಾಪಿಸಲಾಗಿದೆ. ಈ ಎರಡು ಮತ ಎಣಿಕಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ, ಫೆÇೀಕಸಿಂಗ್ ಲೈಟ್, ಧ್ವನಿವರ್ಧಕ ಅಳವಡಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ