
ಕರೀಂನಗರ (ತೆಲಂಗಾಣ), ಮೇ 10-ಕಾಂಗ್ರೆಸ್ ಕಾರ್ಯಕರ್ತ ಮತ್ತು ಉದ್ಯಮಿಯೊಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಕೊಂದಿರುವ ಘಟನೆ ಪಕ್ಕದ ಜಗತಿಯಾಲ್ ಜಿಲ್ಲೆಯ ದೇವಾಲಯ ಪಟ್ಟಣದ ಧರ್ಮಪುರಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಮುಂಬೈನಲ್ಲಿ ಮದ್ಯದ ವಹಿವಾಟು ನಡೆಸುತ್ತಿದ್ದ ಸತ್ಯನಾರಾಯಣ ಗೌಡ್ ಹತ್ಯೆಗೀಡಾದ ಉದ್ಯಮಿ ಮತ್ತು ಕಾಂಗ್ರೆಸ್ ಕಾರ್ಯಕರ್ತ. ಕರೀಂನಗರ್ ಜಿಲ್ಲೆಯಲ್ಲಿ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಿದ ನಂತರ ಮುಂಬೈಗೆ ಅವರು ಕಾರಿನಲ್ಲಿ ತೆರಳುತ್ತಿದ್ದಾಗ ರಾತ್ರಿ 10.45ರಲ್ಲಿ ಈ ಘಟನೆ ನಡೆದಿದೆ. ಪೆÇಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.