ಮಿಜೋರಾಂನಲ್ಲಿ ಚಿನ್ನ ಕಳ್ಳಸಾಗಣೆ:

ಐಜ್ವಾಲ್, ಮೇ 10-ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಕಸ್ಟಮ್ಸ್ ಅಧಿಕಾರಿಗಳು ಮ್ಯಾನ್ಮಾರ್‍ನ ಇಬ್ಬರು ಪ್ರಜೆಗಳನ್ನು ಬಂಧಿಸಿ 269 ಲಕ್ಷ ರೂ.ಮೌಲ್ಯದ 52 ಬಂಗಾರದ ಬಿಸ್ಕತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಸುಳಿವಿನ ಮೇರೆಗೆ ಐಜ್ವಾಲ್ ಕಸ್ಟಮ್ ವಿಭಾಗದ ಕಳ್ಳಸಾಗಣೆ ನಿಗ್ರಹ ಘಟಕದ ಅಧಿಕಾರಿಗಳು ಸೇಲಿಂಗ್ ಪ್ರದೇಶದ ಸೀಮಾ ಸುಂಕ ತಪಾಸಣೆ ದ್ವಾರದ ಬಳಿ ಕಾರನ್ನು ಅಡ್ಡಗಟ್ಟಿ 8 ಕೆಜಿ ತೂಕದ 52 ಗೋಲ್ಡ್ ಬಿಸ್ಕಟ್‍ಗಳನ್ನು ವಶಪಡಿಸಿಕೊಂಡರು ಎಂದು ವರಿಷ್ಠಾಧಿಕಾರಿ ಎಲ್.ಎಚ್.ಹಾವೋಕಿಪ್ ತಿಳಿಸಿದ್ದಾರೆ.
ಈ ಸಂಬಂಧ ಮ್ಯಾನ್ಮಾರ್ ಪ್ರಜೆಗಳಾದ ಡೇವಿಡ್ ಮೌಂಗ್‍ಪಿ(23) ಹಾಗೂ ಸೋಮ್‍ಖಾನ್‍ಕ್ಯಾಪ್ (19) ಎಂಬುವರನ್ನು ಬಂಧಿಸಲಾಗಿದೆ.
ನಿನ್ನೆ ಭಾರತ-ಮ್ಯಾನ್ಮಾರ್ ಗಡಿ ಭಾಗದ ಹೈಐಕ್ವಾನ್ ತಾಂಡಾ ಮನೆ ಮೇಲೆ ಪೆÇಲೀಸರು ದಾಳಿ ನಡೆಸಿ 9.96 ಕೋಟಿ ಕೆಜಿ ತೂಕದ 3.18 ಕೋಟಿ ರೂ. ಮೌಲ್ಯ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದರು. ಈ ಸಂಬಂಧ ಒಬ್ಬನನ್ನು ಬಂಧಿಸಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ