ಮೈಸೂರು: ರಾಮದಾಸ್ ಪರವಾಗಿ ವಿಜಯೇಂದ್ರ ನಡೆಸಿದ ಸಂಧಾನ ವಿಫಲಗೊಂಡಿದೆ.
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ತಡ ರಾತ್ರಿ ನಡೆದ ಸಭೆಯಲ್ಲಿ ರಾಮದಾಸ್ ವಿರುದ್ದ ವೀರಶೈವ ಮುಖಂಡರು ಅಸಮಾಧಾನ ಹೊರಹಾಕಿದ್ದರು.
ವಿಜಯೇಂದ್ರ ಮನವಿಗೂ ಜಗ್ಗದ ಮುಖಂಡರು ಟಿಕೆಟ್ ಘೋಷಣೆ ಬಳಿಕ ಯಾವೊಬ್ಬ ವೀರಶೈವ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ರಾಮದಾಸ್ಹಿಂದೆ ಯಡಿಯೂರಪ್ಪ ಅವರ ರಾಜೀನಾಮೆ ಕೇಳಿದ ವ್ಯಕ್ತಿ ಪರ ಯಾಕೆ ಬೆಂಬಲ ಕೇಳುವಿರಿ ಕಿಡಿಕಾರಿದ್ದಾರೆ.
ರಾಮದಾಸ್ ರಿಂದ ವೀರಶೈವ ಸಮುದಾಯಕ್ಕೆ ಅನ್ಯಾಯವಾಗಿದ್ದು, ಆರಂಭದಿಂದ ವಿಶ್ವಾಸಕ್ಕೆ ಪಡೆಯದೆ ಕೊನೇ ಕ್ಷಣದಲ್ಲಿ ಬೆಂಬಲ ಅಸಾಧ್ಯ ಹಣದಿಂದಲೇ ಚುನಾವಣೆ ಎದುರಿಸುವವರಿಗೆ ಈ ಬಾರಿಯ ಚುನವಣೆಯಲ್ಲಿ ತಕ್ಕ ಪಾಠ ಕಲಿಸುವ ಎಚ್ಚರಿಕೆ ನೀಡಿದ್ದಾರೆ.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಂಧಾನ ಸಭೆ ವಿಫಲಗೊಂಡಿದ್ದು, ವೀರಶೈವ ಸಮುದಾಯ ತಿರುಗಿಬಿದ್ದಿರುವ ಕಾರಣ ಪೀಕಲಾಟಕ್ಕೆ ಸಿಲುಕಿರುವ ಕೆ.ಆರ್. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮದಾಸ್ ಸದ್ಯ ಸಂಕಷ್ಟದಲ್ಲಿದ್ದಾರೆ.