ಬೆಂಗಳೂರು, ಮೇ 09- ಇದೇ ತಿಂಗಳು 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಹೆಚ್ಚಳವಾಗುವಂತೆ ಪ್ರೋತ್ಸಾಹಿಸುವ ಸಲುವಾಗಿ ಲಕ್ಕಿ ಡ್ರಾ ಮೂಲಕ 10 ಬೈಕ್ಗಳನ್ನು ವಿತರಿಸಲು ರಾಜಾಜಿನಗರ ಅನುಗ್ರಹ ಕಂಪ್ಯೂಟರ್ ಮಾಲೀಕ ಶ್ರೀನಿವಾಸ್ ನಿರ್ಧರಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮತದಾರರು ಯಾರಿಗಾದರೂ ಮತ ಚಲಾಯಿಸಿ. ಆದರೆ ತಪ್ಪದೆ ನಿಮ್ಮ ಮತದಾನ ಮಾಡಿ ನಿಮಗಿರುವ ಸಂವಿಧಾನ ಬದ್ಧ ಹಕ್ಕನ್ನು ಸದುಪಯೋಗಪಡಿಸಿಕೊಳ್ಳಿ. ಒಂದು ವೇಳೆ ಯಾರಿಗೂ ಮತದಾನ ಮಾಡಲು ಇಚ್ಚಿಸದವರು ನೋಟಾ ಬಳಸಿ ಮತದಾನ ಮಾಡಬಹುದು. ಹೀಗೆ ಮತದಾನ ಮಾಡಿರುವವರು ತಮ್ಮ ಮಾಹಿತಿಯನ್ನು ನಾವು ನೀಡುವ ವಾಟ್ಸಾಪ್ ಮೂಲಕ ಕಳುಹಿಸಿದರೆ ಅವರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
ಆಯ್ಕೆಯಾದ 10ಜನರಿಗೆ ಬಜಾಜ್ ಕಂಪನಿಯ ಸಿಟಿ 100ಬಿ ಬೈಕ್ಗಳನ್ನು ನೀಡಲಾಗುವುದು.
ಮೇ 12ರಂದು ಮತದಾನ ಮಾಡಿದ ನಂತರ ಇಂಕಿನ ಗುರುತುಳ್ಳ ಬೆರಳಿನ ಪೆÇೀಟೋವನ್ನು 50 ದಿನದೊಳಗೆ ವಾಟ್ಸಾಪ್ ಸಂಖ್ಯೆ 9590095900 ಇಲ್ಲಿಗೆ ಕಳುಹಿಸಬೇಕು.ವಾಟ್ಸಾಪ್ ಸಂಖ್ಯೆಯ ಕೊನೆಯ 5 ಅಂಕಿಗಳೇ ನಿಮ್ಮ ಅದೃಷ್ಟ ಸಂಖ್ಯೆ ಆಗಲಿದೆ ಎಂದರು.
ಲಕ್ಕಿ ಡ್ರಾದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಸೂಚ್ಯಂಕ ಬಳಸಿಕೊಳ್ಳಲಾಗುತ್ತದೆ.
ಜು.10 ಸಂಜೆ 7 ಗಂಟೆಗೆ ಸೂಚ್ಯಂಕ 7 ಅಂಕಿಗಳ ಪೈಕಿ 2 ಅಂಕಿ ಸೇರಿಸಿ ವಾಟ್ಸಾಪ್ನ 5 ಅಂಕಿಗಳೊಂದಿಗೆ ಬರುವ ಸಂಖ್ಯೆ ಡ್ರಾದ ವಿಜೇತ ಸಂಖ್ಯೆಯಾಗಿರುತ್ತದೆ ಎಂದರು.
ವಿಜೇತರಿಗೆ ನೀಡಲಾಗುವ ಬೈಕ್ಗೆ ನೋಂದಣಿ ಹಾಗೂ ಇತರೆ ವೆಚ್ಚವನ್ನು ನಾವೇ ಭರಿಸುವುದಾಗಿ ತಿಳಿಸಿದರು.