ದಾಬಸ್ಪೇಟೆ ,ಮೇ8- ನೀರು ಕುಡಿಯಲು ಹೋದ ಕರುವಿಗೆ ವಿದ್ಯುತ್ ತಗುಲಿ ಮೃತಪಟ್ಟಿರುವ ಘಟನೆ ಸೋಂಪುರ ಹೋಬಳಿಯ ಹೊನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೊನ್ನೇನಹಳ್ಳಿ ಗ್ರಾಮದ ರೈತ ಸಿದ್ದಗಂಗಪ್ಪ ಎಂಬುವವರಿಗೆ ಸೇರಿದ ಕರು ಹೊನ್ನೇನಹಳ್ಳಿ ಗ್ರಾಪಂ ವ್ಯಾಪ್ತಿಯಿಂದ ನಿರ್ಮಿಸಿರುವ ತೊಟ್ಟಿಯಲ್ಲಿ ನೀರು ಕುಡಿಯತ್ತಿದ್ದಾಗ ತೊಟ್ಟಿಯ ಪಕ್ಕದಲ್ಲೇ ಇದ್ದ ಟ್ರಾನ್ಸ್ಪಾರ್ಮರ್ನ ವಿದ್ಯುತ್ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದೆ,
ಘಟನೆಗೆ ಕೆಇಬಿ ಅಧಿಕಾರಿಗಳೇ ನೇರ ಹೊಣೆ ಎಂದು ರೈತ ಸಿದ್ದಗಂಗಪ್ಪ ಆರೋಪಿಸಿದ್ದು, ಹಸು ಸಾಕಿ ಮನೆಯ ಸಂಸಾರ ನಡೆಸುತ್ತಿದ್ದು ಈಗ ಆಸರೆಯಾಗಿದ್ದಒಂದು ಕರುವನ್ನು ಕಳೆದುಕೊಂಡು ದಿಕ್ಕೇ ತೋಚದಂತಾಗಿದ್ದು ನನಗೆ 25 ಸಾವಿರದಷ್ಟು ನಷ್ಟವಾಗಿದೆ ಎಂದು ಎಂದು ಅಳಲು ತೋಡಿಕೊಂಡಿದ್ದಾರೆ.
ಕಳೆದ ಎರಡು ತಿಂಗಳಿಂದ ವಿದ್ಯುತ್ ಕಂಬವನ್ನು ಸರಿಪಡಿಸುವಂತೆ ಮನವಿ ಮಾಡಿದ್ದರೂ ಸೂಕ್ತ ಕ್ರಮ ಕೈಗೊಳ್ಳದೆ ರೈತರ ಜೊತೆ ಚೆಲ್ಲಾಟ ಆಡಿದ್ದೀರಾ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೆಇಬಿ ಸಹಾಯಕ ಅಧಿಕಾರಿ ಪ್ರಭಾಕರ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಈಗ ಕರುವೊಂದು ಪ್ರಾಣ ಬಿಟ್ಟಿದೆ. ಇನ್ನು ಯಾರನ್ನೋ ಬಲಿ ಪಡೆಯುತ್ತೋ ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ, ತೆಗೆದುಕೊಂಡು ಉಂಟಾಗಿರುವ ಅನಾಹುತಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಘಟನಾ ಸ್ಥಳಕ್ಕೆ ಜಿ.ಪಂ.ಸದಸ್ಯ ನಂಜುಂಡಪ್ಪ, ಗ್ರಾ.ಪಂ.ಉಪಾಧ್ಯಕ್ಷ ಸುರೇಶ್, ಪಿಡಿಓ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.