ನವದೆಹಲಿ:ಮೇ-8: ಅತ್ಯಾಚಾರಕ್ಕೆ ಮಹಿಳೆಯರು ಧರಿಸುವ ಉಡುಪಗಳೇ ಕಾರಣ ಎಂಬುದು ಹಾಸ್ಯಾಸ್ಪದ.ಮಹಿಳೆಯರು ತೊಡುವ ಉಡುಪುಗಳಿಗೂ ಅವರ ಮೇಲೆ ನಡೆಯುವ ಅತ್ಯಾಚಾರಗಳಿಗೂ ಯಾವುದೇ ಸಂಬಂಧ ಇಲ್ಲ. ಜನರು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್ ಕರೆ ನೀಡಿದ್ದಾರೆ.
ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ(FICCI) ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅತ್ಯಾಚಾರಕ್ಕೆ ಮಹಿಳೆಯರು ಧರಿಸುವ ಉಡುಪುಗಳೇ ಕಾರಣ ಎನ್ನುವುದಾದರೆ, ವಯಸ್ಸಾದ ಮಹಿಳೆ ಹಾಗೂ ಮಕ್ಕಳು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಹಾಗಾದರೆ ಇದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಕ್ಕೆ ಅವರು ಧರಿಸುವ ಉಡುಪಗಳೇ ಕಾರಣ ಎಂದು ಕೆಲವರು ಹೇಳುತ್ತಾರೆ. ಇಂತಹಹೇಳಿಕೆಗಳು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾನೂನು ಸಂಸ್ಥೆಗಳು ಪೂರ್ವಭಾವಿಯಾಗಿ ಮಹಿಳೆಯರಿಗೆ ಹೆಚ್ಚು ಸುರಕ್ಷತೆಯನ್ನು ಒದಗಿಸಬೇಕಾಗಿದೆ. 10 ಅತ್ಯಾಚಾರ ಪ್ರಕರಣಗಳನ್ನು ಗಮನಿಸಿದರೆ, ಅಂದಾಜು 7 ಪ್ರಕರಣಗಳ ಸಂತ್ರಸ್ತೆ ತನಗೆ ಗೊತ್ತಿರುವವರಿಂದಲೇ ಕಿರುಕುಳಕ್ಕೆ ಒಳಗಾಗಿರುತ್ತಾಳೆ. ಅದು ಸಂಬಂಧಿಕರು, ಸ್ನೇಹಿತ ಹಾಗೂ ನೆರೆ ಮನೆಯವರಾಗಿರಬಹುದು ಎಂದು ತಿಳಿಸಿದ್ದಾರೆ.
Rapes have nothing to do with a woman’s clothes, Defence Minister Nirmala Sitharaman