ಹಣ ಹಂಚಿ ಗೆಲವು ಸಾಧಿಸಲು ಸಿಎಂ ಹಿಂಬಾಲಕರು ಬಾದಾಮಿಯಲ್ಲಿ ಠಿಕಾಣಿ ಹೂಡಿದ್ದಾರೆ: ಶ್ರೀರಾಮುಲು ಗಂಭೀರ ಆರೋಪ

ಗದಗ:ಮೇ-8: ಹಣ ಹಂಚಿ ಗೆಲವು ಸಾಧಿಸಲು ಸಿಎಂ ಹಿಂಬಾಲಕರು ಬಾದಾಮಿಯಲ್ಲಿ ಠಿಕಾಣಿ ಹೂಡಿದ್ದಾರೆ ಎಂದು ಮಾಜಿ ಸಚಿವ, ಬಾದಾಮಿ, ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು, ಮುಖ್ಯಮಂತ್ರಿ ಸಿದ್ದರಾಮಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗದಗ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಪರ ಪ್ರಚಾರ ನಡೆಸಿದ ಶ್ರೀರಾಮುಲು, ಸಿಎಂ ವಿರುದ್ಧ ಗಂಭೀರ ಆರೋಪಮಾಡಿದ್ದಾರೆ. ನಿನ್ನೆ ಬಾದಾಮಿಯಲ್ಲಿ ನಡೆದ ಐಟಿ ದಾಳಿ ಸಂದರ್ಭದಲ್ಲಿ ಸಿಎಂ ಇಬ್ರಾಹಿಂ.. ಎಸ್ ಆರ್ ಪಾಟೀಲ್ ಹಾಗೂ ಅವರ ಹಿಂಬಾಲಕರು ಬಚ್ಚಿಟ್ಟ ಹಣ ಸಿಕ್ಕಿದೆ. ಬಾದಾಮಿಯ ಕೃಷ್ಣ ಹೆರಿಟೇಜ್ ನಲ್ಲಿ ರೇಡ್ ಆದಾಗ ಸಿಎಂ ಹಿಂಬಾಲಕರು ಹಣ ಸಮೇತ ಪರಾರಿ ಆಗಿದ್ದಾರೆ. ಜತೆಗೆ ಸಾಕಷ್ಟು ಹಣವೂ ರೇಡ್ ನಲ್ಲಿ ಸಿಕ್ಕಿದೆ ಎಂದರು.

ಸಿಎಂ ಅವರೇ ಲೋಹಿಯಾ ಸಿದ್ದಾಂತದ ಕುರಿತು ಮಾತಾಡ್ತೀರಿ, ಹಣ ಹಂಚೋ ಕೆಲಸ ನಿಮಗೆ ಕೆಟ್ಟದ್ದು ಅನ್ನಿಸಲಿಲ್ವಾ ಎಂದು ಪ್ರೆಶ್ನಿಸಿದರು. ಸಂವಿಧಾನದ ಮೇಲೆ‌ ಗೌರವ ಇದ್ರೆ ಹಿಂಬಾಲಕರನ್ನು ಹಿಂದಕ್ಕೆ ಕರಸಿಕೊಳ್ಳಿ. ಹಣದಿಂದ ಚುನಾವಣೆ ನಡೆಸುವ ಸಂಪ್ರದಾಯ ಪ್ರಾರಂಭಿಸಿದ್ದೀರಿ. ಅಕ್ರಮ ಮಾರ್ಗದಿಂದ ಚುನಾವಣೆ ಮಾಡಿದ್ರೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ
ಎಂದು ಗುಡುಗಿದರು.

ಗದಗನಲ್ಲಿ ಪ್ರಚಾರಕ್ಕೆ ಬಾರದಂತೆ ಶ್ರೀರಾಮುಲುರನ್ನು ಕಾಂಗ್ರೆಸ್ ತಡೆಹಿಡಿದಿದೆ ಎಂಬ ಆರೋಪ ಅಲ್ಲಗಳೆದ ರಾಮುಲು, ಎರೆಡು ಕಡೆ ಸ್ಪರ್ಧೆ ಮಾಡಿರುವ ನಾನು ಇನ್ನೂ ನನ್ನ ಕ್ಷೇತ್ರಕ್ಕೇ ಹೋಗಿಲ್ಲ. ಗದಗ ಕ್ಷೇತ್ರಕ್ಕೆ ಎರೆಡನೇ ಬಾರಿ ಪ್ರಚಾರಕ್ಕೆ ಬಂದಿದ್ದೇನೆ. ಆ ವಿಚಾರ ಕಾಂಗ್ರೆಸ್ ನವರಿಗೆ ಗೊತ್ತು ಹೀಗಾಗಿ ಸುಳ್ಳು ಪ್ರಚಾರ ಮಾಡ್ತಿದ್ದಾರೆ ಹೀಗಾಗಿ ಕಾಂಗ್ರೆಸ್ ನವರ ಆರೋಪಕ್ಕೆ ಬೆಲ ಕೊಡೋ ಅವಶ್ಯಕತೆಯಿಲ್ಲ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ