ಬೆಂಗಳೂರು, ಮೇ 5-ಕಾಂಗ್ರೆಸ್ ಅಭ್ಯರ್ಥಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಸುಮಾರು 10 ಕೋಟಿ ರೂ. ಮೌಲ್ಯದ ನಿವೇಶನಗಳ ವಿವರ ಘೋಷಿಸದೆ ಮುಚ್ಚಿಟ್ಟಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತರೊಬ್ಬರು ದೂರು ನೀಡಿದ್ದಾರೆ.
ಶ್ರೀರಂಗಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಂಡಿಸಿದ್ಧನಗೌಡ ವಿರುದ್ಧ ಆರ್ಟಿಐ ಕಾರ್ಯಕರ್ತ ಕೆ.ಆರ್.ರವೀಂದ್ರ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ರಮೇಶ್ ಬಂಡಿಸಿದ್ಧನಗೌಡ ತಮ್ಮ ಹೆಸರಿನಲ್ಲಿರುವ ಒಂದು ಹಾಗೂ ಪತ್ನಿ ಸುಮತಿ ಹೆಸರಿನಲ್ಲಿರುವ 85 ನಿವೇಶನಗಳ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ. ಕಿರಂಗೂರಿನ ಸರ್ವೇ ನಂ.402/2, 418/3, 418/4, 419/2, 419/3 ಜಮೀನಿನಲ್ಲಿ ಮಂಡ್ಯ ವಿವೇಕಾನಂದ ಬಡಾವಣೆಯಲ್ಲಿ ನಿವೇಶನಗಳನ್ನು ಹೊಂದಿದ್ದಾರೆ. ಇದರ ಮೌಲ್ಯ ಸುಮಾರು 10 ಕೋಟಿಗೂ ಹೆಚ್ಚಿದೆ. ಆದರೆ ಈ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಒದಗಿಸಿಲ್ಲ. ಹಾಗಾಗಿ ರಮೇಶ್ ಬಂಡಿಸಿದ್ಧನಗೌಡ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.