ಮೈಸೂರು ನಗರ ಸಾರಿಗೆ ಬಸ್‍ಗಳ ಕಾರ್ಯಾಚರಣೆ ಕುರಿತು ದೇಶದಲ್ಲೇ ವಿನೂತನ ಮಾದರಿಯ ಜಾಣ ಸಾರಿಗೆ ವ್ಯವಸ್ಥೆ ಜಾರಿಗೆ ನಿರ್ಧಾರ

ಬೆಂಗಳೂರು, ಮೇ 5-ಕೆಎಸ್‍ಆರ್‍ಟಿಸಿಯಿಂದ ಓಪನ್ ಡಾಟಾ(ಮುಕ್ತ ದತ್ತಾಂಶ) ಕಾರ್ಯಕ್ರಮದಡಿ ಮೈಸೂರು ನಗರ ಸಾರಿಗೆ ಬಸ್‍ಗಳ ಕಾರ್ಯಾಚರಣೆ ಕುರಿತಾದ ಸ್ಥಿರ ಹಾಗೂ ನೈಜ ಸಮಯದ (ಸ್ಟ್ಯಾಟಿಕ್ ಅಂಡ್ ರಿಯಲ್ ಟೈಂ) ಜಾಣ ಸಾರಿಗೆ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ದೇಶದಲ್ಲೇ ವಿನೂತನ ಮಾದರಿಯ ವ್ಯವಸ್ಥೆಯನ್ನು ಪ್ರಪ್ರಥಮವಾಗಿ ಜಾರಿಗೊಳಿಸಲು ಮುಂದಾಗಿದೆ.

ಅಂತಾರಾಷ್ಟ್ರೀಯ ಮಟ್ಟದ ಮಾನದಂಡವಾದ ಜನರಲ್ ಟ್ರಾನ್ಸ್‍ಸಿಟ್ ಫೀಡ್ ಸ್ಪೆಸಿಫಿಕೇಷನ್ (ಜಿಟಿಎಫ್‍ಎಸ್) ಮಾದರಿಯಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲು ಉದ್ದೇಶಿಸಲಾಗಿದ್ದು, ಸ್ಟಾರ್ಟ್ ಅಪ್ ಕಂಪೆನಿಗಳು ಮತ್ತು ಇತರೆ ಉದ್ಯಮಗಳು ಈ ದತ್ತಾಂಶ ಉಪಯೋಗಿಸುವ ಮೂಲಕ ಹೊಸ ಸೇವೆಯನ್ನು ಆರಂಭಿಸಲು ಸಾಧ್ಯವಾಗಲಿದೆ.

ಇದರಿಂದ ಹೆಚ್ಚಿನ ಪ್ರಯಾಣಿಕರನ್ನು ಸೆಳೆಯಲು ಸಹಕಾರಿಯಾಗಲಿದ್ದು, ಮೈಸೂರಿನಲ್ಲಿ ವಿಶ್ವಬ್ಯಾಂಕ್ ಸಹಕಾರದೊಂದಿಗೆ ಕೇಂದ್ರ ಸರ್ಕಾರ ಈ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಇದರಡಿ ಬಸ್‍ಗಳ ಆಗಮನ ಮತ್ತು ನಿರ್ಗಮನದ ವೇಳೆ ಕರಾರುವಕ್ಕಾಗಿ ತಿಳಿಯಬಹುದಾಗಿದೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಈ ನೂತನ ವ್ಯವಸ್ಥೆಯ ಮಾದರಿಯನ್ನು ನಿಗಮ ಪ್ರಯಾಣಿಕರ ಪ್ರದರ್ಶನ ಫಲಕಗಳು, ಎಸ್‍ಎಂಎಸ್, ಐವಿಆರ್‍ಎಸ್, ವೆಬ್‍ಸೈಟ್ ಹಾಗೂ ಮೊಬೈಲ್ ಆ್ಯಪ್ ಮೂಲಕ ಒದಗಿಸುತ್ತಿದ್ದು, ಇದರ ಪ್ರಯೋಜನ ಪಡೆಯುವಂತೆ ಕೋರಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ