ನನಗೆ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ. ಯಾರು ಕೆಲಸ ಮಾಡುತ್ತಾರೋ ಅವರ ಪರ ಪ್ರಚಾರ ಮಾಡುತ್ತೇನೆ – ರಾಕಿಂಗ್ ಸ್ಟಾರ್ ಯಶ್

ಹಾಸನ, ಮೇ 3-ನನಗೆ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ. ಯಾರು ಕೆಲಸ ಮಾಡುತ್ತಾರೋ ಅವರ ಪರ ಪ್ರಚಾರ ಮಾಡುತ್ತೇನೆ ಎಂದು ರಾಕಿಂಗ್ ಸ್ಟಾರ್ ಯಶ್ ಇಂದಿಲ್ಲಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾರು ಕೆಲಸ ಮಾಡುತ್ತಾರೋ ಅಂಥವರು ನನ್ನನ್ನು ಪ್ರಚಾರಕ್ಕೆ ಕರೆದರೆ ಬರುತ್ತೇನೆ. ಕಾಂಗ್ರೆಸ್‍ಗೂ ಹೋಗುತ್ತೇನೆ. ಬಿಜೆಪಿಗೂ ಸೈ. ಕೆಲಸ ಮಾಡುವವರ ಪರ ನನ್ನ ಬೆಂಬಲವಿರುತ್ತದೆ ಎಂದು ಸ್ಪಷ್ಟಪಡಿಸಿದರು.
ಎಲ್ಲ ರಾಜಕೀಯ ಪಕ್ಷಗಳಲ್ಲೂ ಗೊಂದಲ ಇದೆ. ಅದು ಎಲ್ಲರಿಗೂ ಗೊತ್ತಿದೆ. ನನಗೆ ಎಲ್ಲರೂ ಬೇಕು, ಎಲ್ಲರೂ ಒಂದೇ ಎಂಬ ಮನೋಭಾವ ನನ್ನದು. ಅಭಿವೃದ್ಧಿ ಸೇರಿದಂತೆ ಕೆಲಸ ಮಾಡುವವರಿಗೆ ನಾನು ಬೆಂಬಲ ನೀಡುತ್ತೇನೆ ಎಂದು ತಿಳಿಸಿದರು.
ನನ್ನ ತಾಯಿಯ ಹುಟ್ಟೂರು ಸಹ ಹಾಸನ. ಎಚ್.ಎಸ್.ಪ್ರಕಾಶ್ ಕುಟುಂಬದವರೊಂದಿಗೆ ನನಗೆ ಉತ್ತಮ ಸಂಬಂಧವಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ