ತಮಿಳುನಾಡಿಗೆ ಕಾವೇರಿ ನೀರು ಬೀಡಲು ಸಾಧ್ಯವಿಲ್ಲ – ಕುರುಬೂರು ಶಾಂತಕುಮಾರ್

ಮೈಸೂರು, ಮೇ.3- ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ಈ ತೀರ್ಪು ಸ್ವಾಗತಿಸುವಂತದ್ದಲ್ಲ ಎಂದರು.
ಕೆಆರ್‍ಎಸ್‍ನಲ್ಲೇ ನೀರಿಲ್ಲ, ಖಾಲಿಯಿದೆ. ರಾಜ್ಯದ ಹಲವೆಡೆ ಅಂದರೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಬರವಿದೆ. ಇಲ್ಲಿನ ಜನತೆಗೆ ಕುಡಿಯಲು ನೀರು ಸಾಕಾಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ನೀರು ಬಿಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ನ್ಯಾಯಾಧೀಶರು ನೀಡಿರುವ ಈ ತೀರ್ಪನ್ನು ಮರು ಪರಿಶೀಲಿಸಲು ರಾಜ್ಯದ ವಕೀಲರು ಅರ್ಜಿ ಸಲ್ಲಿಸಬೇಕೆಂದು ಕುರುಬೂರು ಆಗ್ರಹಿಸಿದರು.
ರಾಜ್ಯದಲ್ಲಿ ಚುನಾವಣೆ ಇರುವ ಹಿನ್ನೆಲೆಯಲ್ಲಿ ಕಾವೇರಿ ಸ್ಕೀಂ ಕರಡು ರಚನೆ ಮಾಡಲಾಗಿಲ್ಲ. ಹಾಗಾಗಿ ಈ ಸಂದರ್ಭದಲ್ಲಿ ನೀರು ಬಿಡಿ ಎಂದರೆ ಹೇಗೆ ನೀರು ಬಿಡಲು ಸಾಧ್ಯ ಎಂದು ಪ್ರಶ್ನಿಸಿದರು. ಸಿದ್ದು ವಿರುದ್ಧ ಅಭಿಯಾನ: ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು  ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಮಹದೇವಪ್ಪ ಅವರನ್ನು ಸೋಲಿಸುವ ಗುರಿ ಹೋಂದಿದ್ದೇವೆ. ಈ ಹಿನ್ನೆಲೆಯಲ್ಲಿ ಇಂದು ಇಂದು ಮತ್ತು ನಾಳೆ ಚಾಮುಂಡೇಶ್ವರಿ ಕ್ಷೇತ್ರ ಹಾಗೂ ಟಿ.ನರಸಿಪುರದಲ್ಲಿ ಜಾಗೃತಿ ಅಭಿಯಾನ ನಡೆಸುವುದಾಗಿ ಹೇಳಿದರು.
ಕಾಂಗ್ರೆಸ್ ಸರ್ಕಾರ ರೈತರಿಗಾಗಲಿ, ಕಬ್ಬು ಬೆಳೆಗಾರರಿಗಾಗಲಿ ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ. ರೈತರ ಕಬ್ಬಿಗೆ ಬೆಂಬಲ ಬೆಲೆ ಘೋಷಿಸಿಲ್ಲ. ಹಾಗಾಗಿ ನಾವು ಇವರನ್ನು ಸೋಲಿಸಲು ಈ ಅಭಿಯಾನ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ