ನ್ಯೂಯಾರ್ಕ್, ಮೇ 1-ಅಮೆರಿಕದ ನ್ಯೂಯಾರ್ಕ್ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಭಾರತೀಯ ಮೂಲದ ಮೂವರು ಮೃತಪಟ್ಟಿದ್ದಾರೆ.
ಭಾನುವಾರ ಸಂಭವಿಸಿದ ಈ ದುರಂತದಲ್ಲಿ ಭಾರತೀಯ ಮೂಲದ ಮಹಿಳೆ ಹರ್ಲಿನ್ ಮಾಗೋ, ಆಕೆಯ ಅಜ್ಜಿ ರಘುವೀರ್ ಕೌರ್ ಕೈಂತ್(82) ಹಾಗೂ ಅಜ್ಜ ಪ್ಯಾರ ಕೈಂತ್(87) ಮೃತಪಟ್ಟಿದ್ದಾರೆ. ಮಾಗೋ ಅವರ 8 ವರ್ಷದ ಪುತ್ರಿ ಮತ್ತು 6 ವರ್ಷದ ಪುತ್ರ ಗಾಯಗೊಂಡಿದ್ದಾರೆ. ಮನೆಯೊಳಗಿದ್ದ ಇತರ ಏಳು ಮಂದಿಯನ್ನು ರಕ್ಷಿಸಲಾಗಿದೆ.