ಕಾಂಗ್ರೆಸ್ ಮುಕ್ತ ಔರಾದ್
ಬೀದರ್, ಮೇ 1, ಕಾಂಗ್ರೆಸ್ ಮುಕ್ತ ಔರಾದ್ ಮಾಡುವ ಕಾಲ ಇದೀಗ ಬಂದಿದ್ದು, ಈ ಚುನಾವಣೆ ಯಲ್ಲಿ ಸಂಪೂರ್ಣ ವಾಗಿ ಕಾಂಗ್ರೆಸ್ ಗೆ ಗಂಟುಮುಡೆ ಕಟ್ಟಿ ಮನೆಗೆ ಕಳುಹಿಸಬೇಕು ಎಂದು ಔರಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಪ್ರಭು ಚಹ್ವಾಣ್ ಹೇಳಿದರು.
ಔರಾದ್ ಕ್ಷೇತ್ರದ ಹಂಗರಗಾ ಗ್ರಾಮದಲ್ಲಿ ಪ್ರಚಾರ ನಡೆಸಿ ಮಾತನಾಡಿ, ಈಗಾಗಲೆ ದೇಶದ 19 ರಾಜ್ಯದ ಗಳಲ್ಲಿ ಕಾಂಗ್ರೆಸ್ ವಾಗಿದೆ. ಈ ಚುನಾವಣೆ ಯಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವ ದು ಪಕ್ಕಾ ಎಂದರು.
ಜಾತಿ, ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕಾಂಗ್ರೆಸ್ ಸಮಾಜ ಒಡೆದಾಳುವ ನೀತಿ ಅನುಸರಿಸಿ ರಾಜಕಾರಣ ಮಾಡುತ್ತಿದೆ. ಆದರೆ ಕಾಂಗ್ರೆಸ್ ನ ಕುತಂತ್ರ ರಾಜಕೀಯ ದಿಂದ ಜನ ಎಚ್ಚೆತ್ತುಕೊಂಡಿದ್ದು ಈ ಚುನಾವಣೆಯಲ್ಲಿ ಕಾಂಗ್ರೆಸ್ ಜನ ತಕ್ಕ ಪಾಠ ಕಲಿಸಲುದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವದು ಪಕ್ಕಾ. ಬಿ.ಎಸ್. ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ. ಯಡಿಯೂರಪ್ಪ ಅವರ ಕೈಬಲಪಡಿಸಲು ಬಿಜೆಪಿ ಗೆ ಹಚ್ಚಿನ ಸಂಖ್ಯೆಯಲ್ಲಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.