ನಾಗಮಾರಪಳ್ಳಿ ಮತಯಾಚನೆ
ಬೀದರ್, ಮೇ 1- ಬೀದರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಮಂಗಳವಾರ ನಗರದ ವಿವಿಧ ಬಡಾವಣೆಯಲ್ಲಿ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು.
ರಾಂಪುರೆ ಬಡಾವಣೆ, ಬ್ಯಾಂಕ್ ಕಾಲೋನಿಯಲ್ಲಿ ಪ್ರಚಾರ ನಡೆಸಿದ ನಾಗಮಾರಪಳ್ಳಿ, ಮೇ 9ರಂದು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಬಹಿರಂಗ ಸಭೆಯನ್ನುದ್ದೆಶಿಸಿ ಮಾತನಾಟಲಿದ್ದಾರೆ.
ಬೀದರ್ ಗೆ ಮೋದಿ ಬಂದು ಹೋದ ನಂತರ ಚಿತ್ರಣ ಬದಲಾಗಲಿದೆ. ಮೋದಿ ಇಲ್ಲಿಗೆ ಬಂದು ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದು ನಮ್ಮ ಸೌಭಾಗ್ಯ ಎಂದು ಹೇಳಿದರು.
ಜಾತಿ ರಾಜಕಾರಣ ಮಾಡುವ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಿ ಎಂದು ಹೇಳಿದರು
ನಂತರ ಸಹೋದರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಜೊತೆಯಲ್ಲಿ ಬೆನಕನಹಳ್ಳಿ ಯಲ್ಲಿ ಪ್ರಚಾರ ನಡೆಸಿದ ಸೂರ್ಯಕಾಂತ ನಾಗಮಾರಪಳ್ಳಿ, ಮನೆ, ಮನೆಗೆ ತೆರಳಿ ಪ್ರಚಾರ ನಡೆಸಿದರು.
ಪ್ರಮುಖರಾದ ಬಾಲಾಜಿ ಚವ್ಹಾಣ್, ಡಾ.ರಜನೀಶ್ ವಾಲಿ, ಭೀಮರಾವ ಪಾಟೀಲ್ ಡಿಗ್ಗಿ, ಜಯಕುಮಾರ ಕಾಂಗೆ, ಉಪೇಂದ್ರ ದೇಶಪಾಂಡೆ, ವಿಜಯಕುಮಾರ ಪಾಟೀಲ್ ಗಾದಗಿ ಇತರರಿದ್ದರು.