ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಾರಿ ಸಂಚಲನ ಮೂಡಿಸಿರುವ ಆಲ್ ಇಂಡಿಯಾ ಮಹಿಳಾ ಎಂಪವರ್ ಮೆಂಟ್ ಪಾರ್ಟಿ ಪ್ರಚಾರಕ್ಕೆ ಬಾಲಿವುಡ್ ತಾರೆಯರು ಮುಂದಾಗಿದ್ದಾರೆ. ನಗರದ ಲೀಲಾ ಪ್ಯಾಲೇಸ್ ಹೊಟೇಲ್ ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್ ಈ ವಿಷಯ ತಿಳಿಸಿದ್ದಾರೆ.
ಖ್ಯಾತ ಬಾಲಿವುಡ್ ನಟ ಸಲ್ಮಾಂ ಖಾನ್ ಸಹೋದರಾದ ಅರ್ಬಾಸ್ ಖಾನ್ ಮತ್ತು ಸುಹೇಲ್ ಖಾನ್ ರಾಜ್ಯದ ಉದ್ದಗಲಕ್ಕೂ ಪಕ್ಷದ ಪರ ಪ್ರಚಾರ ಮಾಡಲಿದ್ದಾರೆಂದು ವಿವರಿಸಿದರು. ರಾಜ್ಯ ನೀರು, ವಿದ್ಯುತ್ ಹಲವಾರು ರೈತರ ಸಮಸ್ಯೆ ಎದುರಿಸುತ್ತಿದೆ ನಾವು ಅಧಿಕಾರಕ್ಕೆ ಬಂದರೆ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಲೋಕಸಭಾ ಚುನಾವಣೆವರೆಗೂ ಮುಂದುವರೆಯಲಿದೆ ಎಂದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಹೋರಾಟ ನಮ್ಮ ಕೆಲಸವಲ್ಲ ಅನ್ಯಾಯದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯಲಿದೆ. ನಾವು ಎಲ್ಲರ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ರೂ. ಹಾಕುತ್ತೇವೆ ಎಂದು ಹೇಳುವುದಿಲ್ಲ. ನಮ್ಮ ಅಭ್ಯರ್ಥಿಗಳ ಪಟ್ಟಿ ನೋಡಿದರೆ ಯಾರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನೀತಿಯನ್ನು ಪಾಲನೆ ಮಾಡುತ್ತಿದ್ದಾರೆ ಎಂಬುದು ಜನರಿಗೆ ತಿಳಿಯುತ್ತದೆ. ಜಾತಿ ಆಧಾರದಲ್ಲಿ ರಾಜಕಾರಣ ಮಾಡುವುದಾದರೆ, ಅದೇ ಆಧಾರದಲ್ಲಿ ಮತ ಕೇಳುವುದಾದರೆ ಇದೇ ರಾಜಕೀಯಕ್ಕೆ ಗುಡ್ ಬೈ ಹೇಳುತ್ತೇನೆ.
ಕಾಂಗ್ರೆಸ್ ಬಿಜೆಪಿ ಪಟ್ಟಿ ನೋಡಿದರೆ ಕೋಟಿ ಕೋಟಿ ಹಣ ಇದ್ದವರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂಬುದು ಗೊತ್ತಾಗುತ್ತೆ ನಮ್ಮ ಪಟ್ಟಿ ನೋಡಿದರೆ ಅಲ್ಲಿ ರೈತರು, ಚಾಲಕರು, ಮಾಣಿಗಳು ಹೀಗೆ ಎಲ್ಲವರ್ಗದ ಜನ ಕಾಣುತ್ತಾರೆ. ಇದೆ ನಮಗೂ ಬೇರೆ ಪಕ್ಷಗಳಿಗೂ ಇರುವ ವ್ಯತ್ಯಾಸ ಎಂದರು.
ಕೆಲವು ಕಡೆ ಬೇರೆ ಪಕ್ಷದ ನಾಯಕರು ನಮ್ಮ ಅಭ್ಯರ್ಥಿಗಳಿಗೆ ಹಣದ ಆಮಿಷ ಒಡ್ಡಿ ನಾಮಪತ್ರ ಹಿಂದಕ್ಕೆ ಪಡೆಯುವಂತೆ ಮಾಡಿದ ಪ್ರಯತ್ನಗಳಿಗೆ ಬೆಲೆಸಿಕ್ಕಿಲ್ಲ ಎಂದರು.
ಸುಹೇಲ್ ಖಾನ್ ಹೇಳಿದ್ದೇನು?
ತಿರುಪತಿ ನೋಡಿದವರಿಗೆ ಡಾ.ನೌಹೀರಾ ಶೇಕ್ ಅವರ ಕೆಲಸ ಕಣ್ಣಿಗೆ ಕಾಣುತ್ತದೆ ದೆಹಲಿ, ಬಾಂಬೆಯಲ್ಲಿ ಕಾಣದಂತಹ ಗುಣಮಟ್ಟ ಶಾಲೆಗಳು ಬಡಮಕ್ಕಳಿಗೆ ಶಿಕ್ಷಣ ನೀಡುತ್ತಿವೆ ಅವರ ಸಮಾಜ ಸೇವೆ ಬಹಳ ಇಷ್ಟವಾಗಿದೆ ಅದಕ್ಕಾಗಿ ಅವರ ಬೆಂಬಲಕ್ಕೆ ನಿಂತಿದ್ದೇನೆ ಕೈಲಾದಷ್ಟು ಮಟ್ಟಿಗೆ ಎಂಇಪಿಗೆ ಸಹಾಯ ಮಾಡುತ್ತೇನೆ ಎಂದರು.
ಅರ್ಬಾಸ್ ಖಾನ್ ಹೇಳಿದಿಷ್ಟು?
ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿರುವ ಮತ್ತು ನೊಂದವರಿಗೆ ನ್ಯಾಯ ಕೊಡಿಸುವ ಡಾ.ನೌಹೀರಾ ಶೇಕ್ ಅವರ ಸಮಾಜ ಸೇವೆ, ರಾಜಕೀಯ ಜಾಣ್ಮೆ ಎಲ್ಲವೂ ನನಗೆ ಇಷ್ಟವಾಗಿದೆ ಎಂಇಪಿ ಪರವಾಗಿ ಕೆಲಸ ಮಾಡಲು ಖುಷಿಯಾಗುತ್ತಿದೆ ಎಂದು ಹೇಳಿದರು.