ಹಲವರು ಪ್ರಭು ಚವ್ಹಾಣ್ ನೇತ್ರತ್ವದಲ್ಲಿ ಬಿಜೆಪಿ ಸೇರ್ಪಡೆ
ಬೀದರ್, ಮೇ 1- ಔರಾದ್ ಮೀಸಲು ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಪ್ರಭು ಚಹ್ವಾಣ ಅವರಿಗೆ ಬೆಂಬಲಿಸಿ ಹಲವರು ಬಿಜೆಪಿ ಸೇರ್ಪಡೆ ಯಾದರು. ಮಂಗಳವಾರ ಲಿಂಗಿ ಗ್ರಾಮದಲ್ಲಿ ಮತಯಾಚನೆ ಮಾಡಿದ ವೇಳೆ ಮುಖಂಡ ಗೋವಿಂದ ಗೌವಣೆ ನೇತೃತ್ವದಲ್ಲಿ ಹಲವರು ಬಿಜೆಪಿ ಸೇರ್ಪಡೆ ಯಾದರು.
ಈ ವೇಳೆ ಮಾತನಾಡಿದ ಪ್ರಭು ಚಹ್ವಾಣ್, ಕ್ಷೇತ್ರದಲ್ಲಿ ಬಿಜೆಪಿ ದಿನದಿಂದ ದಿನಕ್ಕೆ ಬಲಿಷ್ಠ ವಾಗುತ್ತಿದೆ. ಕ್ಷೇತ್ರದ ಜನರ ಪ್ರೀತಿ, ವಿಶ್ವಾಸಕ್ಕೆ ನಾನು ಋಣಿ ಎಂದ ಹೇಳಿದರು.
ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೇ 9 ರಂದು ಬೀದರ್ ಗೆ ಆಗಮಿಸುತ್ತಿದ್ದಾರೆ. ಮೋದಿ ಬಂದು ಹೋದ ಮೇಲೆ ಜಿಲ್ಲೆಯ ಚಿತ್ರಣ ಬದಲಾಗಲಿದೆ. ಜಿಲ್ಲೆಯ ಆರು ಕ್ಷೇತ್ರದಲ್ಲಿ ಕಮಲ ಅರಳಲಿದೆ ಎಂದು ವಿಶ್ವಾಶ ವ್ಯಕ್ತಪಡಿಸಿದರು.