
ಬೆಂಗಳೂರು ಏ 26: ಇಂದು ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು, ಕಚೇರಿಧಾರಕರು ಹಾಗು ಕಾರ್ಯಕರ್ತರೊಂದಿಗೆ ಚರ್ಚೆಯನ್ನು ಆನ್ಲೈನ್ ಮೂಲಕ ನಡೆಸಿ, ವಿವಿಧ ಕೇಂದ್ರ ಸರ್ಕಾರ ಯೋಜನೆಗಳ ಮೂಲಕ ಕರ್ನಾಟಕದಲ್ಲಿ ಅಭಿವೃದ್ಧಿ ಕಾರ್ಯ ಮಾಡಿರುವ ಬಗ್ಗೆ ಗಮನ ಸೆಳೆದರು.
ಇದನ್ನು ಬೆಂಬಲಿಸುತ್ತ ಮಾಜಿ ಉಪಮುಖ್ಯಮಂತ್ರಿ ಹಾಗು ಪದ್ಮನಾಭನಗರದ ಬಿಜೆಪಿಯ ಅಭ್ಯರ್ಥಿಯಾದ ಆರ್. ಅಶೋಕ್ ರವರು ನಾವು ಕರ್ನಾಟಕದಲ್ಲಿ ಅಧಿಕಾರ ಬಂದಮೇಲೆ ಬೆಂಗಳೂರಿನ ಅಭಿವೃದ್ಧಿಗೆ ಆಧ್ಯತೆ ನೀಡುತ್ತೇವೆ. ಇಲ್ಲಿನ ಸಂಚಾರ (ಟ್ರಾಫಿಕ್) ದಟ್ಟಣೆಯನ್ನು ಉತ್ಪಾದಕವಾಗಿ ಪರಿಹರಿಸುತ್ತೇವೆ. ಹಾಗೆಯೇ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳನ್ನು 100% ಕಾರ್ಯಗತಗೊಳಿಸುತ್ತೇವೆ ಎಂದರು.