ಕೋಲಾರದಲ್ಲಿ ದ್ವೇಷದ ರಾಜಕಾರಣ: ಬಿಜೆಪಿ ಅಭ್ಯರ್ಥಿಯ ಕಾರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಕೋಲಾರ:ಏ-24 : ವಿಧಾನಸಭಾ ಚುನಾವಣೆ ಕಾವೇರುತ್ತಿದ್ದಂತೆಯೇ ಧ್ವೇಷದ ರಾಜಕಾರಣವೂ ತೀವ್ರಗೊಳ್ಳಲಾರಂಭಿಸಿದೆ. ಕೋಲಾರದಲ್ಲಿ ದ್ವೇಷದ ರಾಜಕಾರಣಕ್ಕೆ ಎರಡು ಕಾರುಗಳು ಬೆಂಕಿಗಾಹುತಿಯಾಗಿವೆ.ಬಿಜೆಪಿ ಅಭ್ಯರ್ಥಿಯ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

 

ಇಲ್ಲಿನ ಕಠಾರಿಪಾಳ್ಯದಲ್ಲಿ ತಡರಾತ್ರಿ ದುಷ್ಕರ್ಮಿಗಳು ಕಾರಿಗೆ ಬೆಂಕಿ ಹಚ್ಚಿದ್ದಾರೆ. ಬಿಜೆಪಿ ಅಭ್ಯರ್ಥಿ ಓಂಶಕ್ತಿ ಛಲಪತಿಯವರಿಗೆ ಸೇರಿದ ಇನ್ನೋವಾ ಕಾರ್‌ಗೆ ಬೆಂಕಿ ಹಚ್ಚಲಾಗಿದ್ದು, ಪಕ್ಕದಲ್ಲಿದ್ದ ಮತ್ತೊಂದು ಮಾರುತಿ-800ಕಾರ್‌ಗೂ ಬೆಂಕಿ ತಗುಲಿದೆ.

ಸ್ಥಳಕ್ಕೆ ಎಸ್ಪಿ ರೋಹಿಣಿ ಕಠೋಚ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಕೋಲಾರ ‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Kolar, BJP candidate, fire to the car,perpetrators

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ