ಜಮ್ಮು- ಕಾಶ್ಮೀರದಲ್ಲಿ ಭದ್ರತಾಪಡೆ ಹಾಗೂ ಪೊಲೀಸರ ಕಾರ್ಯಾಚರಣೆ: 8 ಉಗ್ರರ ಹತ್ಯೆ

ಶ್ರೀನಗರ:ಏ-1: ಜಮ್ಮು- ಕಾಶ್ಮೀರದಲ್ಲಿ ಭದ್ರತಾಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಎಂಟು ಉಗ್ರರು ಮೃತಪಟ್ಟಿದ್ದಾರೆ.

ಇಲ್ಲಿನ ಶೋಪಿಯಾನ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿಯ ದ್ರಾಗದ್‌ ಸಮೀಪದ ಕಚೊದರಾ ಗ್ರಾಮದಲ್ಲಿ ಉಗ್ರರಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಸೇನಾ ಯೋಧರು ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು.

ಈ ಸಂದರ್ಭದಲ್ಲಿ ಉಗ್ರರು ಯೋಧರು, ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಹಾಗೂ ಯೋಧರು ಪ್ರತಿದಾಳಿ ನಡೆಸಿದರು. ಇದರ ಪರಿಣಾಮ ಏಳು ಉಗ್ರರು ಮೃತಪಟ್ಟಿದ್ದಾರೆ. ಇಬ್ಬರು ಯೋಧರು ಗಾಯಗೊಂಡಿದ್ದಾರೆ.

ಶನಿವಾರ ತಡರಾತ್ರಿ ನಡೆದ ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಯೋಧರು ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದಾರೆ.

ಈ ನಡುವೆ ಅನಂತನಾಗ್‌ ಜಿಲ್ಲೆಯ ದಿಯಾಗಾಮ್‌ ಎಂಬಲ್ಲಿ ಒಬ್ಬ ಉಗ್ರ ಪೊಲೀಸ್ ಕಾರ್ಯಾಚರಣೆನಲ್ಲಿ ಹತನಾಗಿದ್ದಾನೆ. ಮತ್ತೊಬ್ಬ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
jammu kashmir, encounter 8 terrorists, gunned down

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ