ಪಾಕ್ ಸೇನೆಯಿಂದ ವಸತಿ ಪ್ರದೇಶಗಳ ಮೇಲೆ ಗುಂಡಿನ ದಾಳಿ: 9 ತಿಂಗಳ ಮುಗು ಸೇರಿ ಒಂದೇ ಕುಟುಂಬದ ಮೂವರು ಸಾವು

ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಮತ್ತೆ ಪಾಕ್ ಸೇನೆ ಉದ್ಧಟತನ ಮುಂದುವರೆಸಿದ್ದು, ಪಾಕ್ ಯೋಧರ ಅಪ್ರಚೋದಿತ ಗುಂಡಿನ ದಾಳಿಗೆ 9 ತಿಂಗಳ ಮಗು, 5 ವರ್ಷದ ಬಾಲಕ ಹಾಗೂ ಮಹಿಳೆ ಸೇರಿದಂತೆ ಒಂದೇ ಕುಟುಂಬದ ಮೂವರು ಬಲಿಯಾಗಿದ್ದಾರೆ.

ರಜೌರಿ, ಪೂಂಚ್​ ಮತ್ತು ಮೇಂದಾರ್​ ವಲಯಗಳಲ್ಲಿ ಪಾಕ್​ ಯೋಧರು ಅಪ್ರಚೋದಿತ ಗುಂಡಿನ ದಾಳಿ ಮುಂದುವರಿಸಿದ್ದು, ನಾಗರಿಕ ವಸತಿ ಪ್ರದೇಶದ ಮೇಲೆ ಶೆಲ್​ ದಾಳಿ ಮಾಡುತ್ತಿದ್ದಾರೆ. ಪೂಂಚ್​ ಜಿಲ್ಲೆಯಲ್ಲಿ ನಾಗರಿಕ ವಸತಿ ಪ್ರದೇಶದ ಮೇಲೆ ಮಾರ್ಟಾರ್​ ಬಾಂಬ್​ಗಳನ್ನು ಸಿಡಿಸುತ್ತಿದ್ದಾರೆ. ಹೋವಿಟ್ಜರ್​ 105 ಎಂಎಂ ಸೇರಿ ಭಾರಿ ಗನ್​ಗಳನ್ನು ಬಳಸಿ ಗುಂಡಿನ ಸುರಿಮಳೆಗೈಯ್ಯುತ್ತಿದ್ದಾರೆ.

ಈ ದಾಳಿಯಲ್ಲಿ ಪೂಂಚ್​ನ ಸಲ್ಟೋರಿ ಎಂಬಲ್ಲಿ 9 ತಿಂಗಳ ಹೆಣ್ಣು ಮಗು, 5 ವರ್ಷದ ಬಾಲಕ ಹಾಗೂ ಒಬ್ಬ ಮಹಿಳೆ ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.

ರುಬಾನಾ ಕೌಸರ್​ (24), ಫಜಾನ್​ (5) ಮತ್ತು ಶಬನಂ (9 ತಿಂಗಳ ಮಗು) ಮೃತರು. ರುಬಾನಾ ಕೌಸರ್​ ಪತಿ ಮೊಹಮ್ಮದ್​ ಯೂನಿಸ್​ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮನ್​ಕೋಟ್​ನಲ್ಲಿ ನಸೀಂ ಅಖ್ತರ್​ ಎಂಬ ಮಹಿಳೆಗೂ ಪಾಕ್​ ಯೋಧರು ಸಿಡಿಸಿದ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಇದಲ್ಲದೆ ಕೃಷ್ಣಘಾಟಿ ಮತ್ತು ಬಾಳಾಕೋಟ್​ ಪ್ರದೇಶದಲ್ಲಿ ಕೂಡ ಪಾಕ್​ ಸೇನೆ ಅಪ್ರಚೋದಿತ ಗುಂಡಿನ ದಾಳಿ ಮುಂದುವರಿಸಿದೆ.

jammu-kashmir,Pakistani forces targeted civilian areas with heavy guns;2 Children, Mother Killed In Pakistan Shelling

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ