ಕರ್ತಾರ್ ಪುರ ಕಾರಿಡಾರ್ ಯೋಜನೆ: ಪಾಕ್ ಆಹ್ವಾನ ತಿರಸ್ಕರಿಸಿದ ಸುಷ್ಮಾ ಸ್ವರಾಜ್

ನವದೆಹಲಿ: ಕರ್ತಾರ್​ಪುರ್​ ಕಾರಿಡಾರ್​ ಯೋಜನೆಯ ಶಿಲಾನ್ಯಾಸದ ಕಾರ್ಯಕ್ರಮ ನ.28ರಂದು ಪಾಕಿಸ್ತಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪಾಕ್ ನೀಡಿದ ಆಹ್ವಾನವನ್ನು ಸ​ಚಿವೆ ನಿರಾಕರಿಸಿದ್ದಾರೆ.

ಕಾರ್ತರ್ಪುರ್ ಕಾರಿಡಾರ್‌ನ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ತಾವೂ ಪಾಲ್ಗೊಳ್ಳುತ್ತಿಲ್ಲ ಬದಲಾಗಿ ಸಂಪುಟದ ಇಬ್ಬರು ಸಹೋದ್ಯೋಗಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸುಷ್ಮ ಸ್ವರಾಜ್​ ಅವರ ಕಚೇರಿ ತಿಳಿಸಿದೆ. ಕಾರ್ಯಕ್ರಮಕ್ಕೆ ಸುಷ್ಮಾ ಸ್ವರಾಜ್​ ಬದಲಾಗಿ ಕೇಂದ್ರ ಸಚಿವರಾದ ಹರ್ಸಿಮ್​ರತ್ ಕೌರ್ ಹಾಗೂ ಹರ್ದೀಪ್ ಪುರಿ ಅವರನ್ನು ಕಳುಹಿಸಿಕೊಡಲಿದೆ ಎಂದು ತಿಳಿದುಬಂದಿದೆ.

ಈ ಕುರಿತು ನವೆಂಬರ್ 28ರಂದು ನಡೆಯಲಿರುವ ಕಾರ್ತರ್ಪುರ ಕಾರ್ಯಕ್ರಮದಲ್ಲಿ ಪಾಲ್ಗೊ ಳ್ಳಲು ಸುಷ್ಮಾ ಸ್ವರಾಜ್, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹಾಗೂ ರಾಜ್ಯ ಸಚಿವ ನವಜೋತ್ ಸಿಂಗ್ ಸಿಧುಗೆ ಪಾಕಿಸ್ತಾನ ವಿದೇಶಾಂಗ ಸಚಿವ ಶಾಹ್ ಮಹಮ್ಮೂದ್ ಖುರೇಶಿ ಟ್ವೀಟ್ ಮಾಡಿದ್ದರು.

ಪಾಕ್​ ಆಹ್ವಾನಕ್ಕೆ ಪತ್ರ​ ಮೂಲಕ ಪ್ರತಿಕ್ರಿಯಿಸಿರುವ ಸ್ವರಾಜ್​ ತೆಲಂಗಾಣ ರಾಜ್ಯದ ಚುನಾವಣೆ ಬದ್ದತೆ ನಮ್ಮ ಮೇಲಿದೆ. ಹೀಗಾಗಿ ಕಾರ್ತರ್​ಪುರ್​ಗೆ ಪ್ರಯಾಣಿಸಲು ಸಾಧ್ಯವಾಗದು. ಪವಿತ್ರ ಗುರುದ್ವಾರದ ಕರ್ತಾರ್​ಪುರ್ ಸಾಹಿಬ್ ಸೌಲಭ್ಯ ದೊರೆಯಲಿ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ನವೆಂಬರ್ 28ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಸಚಿವರಾದ ಹರ್ಸಿಮ್​ರತ್​ ಕೌರ್ ಹಾಗೂ ಹರ್ದೀಪ್ ಸಿಂಗ್ ಪುರಿ ಅವರನ್ನು ಭಾರತದ ಪ್ರತಿನಿಧಿಗಳಾಗಿ ಕಳುಹಿಸಿ ಕೊಡಲಿದೆ ಎಂದು ಪಾಕ್​ ವಿದೇಶಾಂಗ ಸಚಿವಾಲಾಯಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

kartarpur corridor,Sushma Swaraj, Declines Pak Invite,2 Ministers To Go

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ