
ರಾಯಚೂರು. ತುಂಗೆಯ ತಟದಲ್ಲಿ ಮತ್ತೊಮ್ಮೆ ಭಕ್ತಿಯ ಕಲರವ ಮೊಳಗಿದೆ. ಮಂತ್ರಾಲಯದ ರಾಯರ ಮಠ ಅಂದ್ರೇನೆ ವರ್ಷವಿಡೀ ಹಬ್ಬದ ವಾತಾವರಣದಿಂದ ಕೂಡಿದ ಪುಣ್ಯ ಸ್ಥಾನ. ಅಂದ ಹಾಗೆ ಶ್ರೀ ಮಠದಲ್ಲಿ ಇಂದೂ ಸಹ ಭಕ್ತಿಯ ಸೆಲೆ ಮನೆ ಮಾಡಿತ್ತು.ರಾಯರ ವರ್ಧಂತಿ ಮಹೋತ್ಸವ,ಮತ್ತು ಪಟ್ಟಾಭಿಷೇಕ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಕಲಿಯುಗದ ಕಾಮಧೇನು, ಕಲ್ಪವೃಕ್ಷ ಎಂದು ದೇಶದಲ್ಲೇ ಹೆಸರುವಾಸಿಯಾದ ತುಂಗೆಯ ತಟದಲ್ಲಿರೋ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿಂದು ಗುರು ರಾಯರ ೪೨೩ ನೇ ವರ್ಧಂತೋತ್ಸವ, ಹಾಗೂ ೩೯೭ ನೇಯ ಪಟ್ಟಾಭಿಷೇಕ ಮಹೋತ್ಸವ ಸೇರಿದಂತೆ ರಾಯರ ವೈಭವೋತ್ಸವ ಅತ್ಯಂತ ಅದ್ದೂರಿಯಿಂದ ಜರುಗಿತು. ಆರು ದಿನಗಳ ಕಾಲ ನಡೆದ ಈ ಗುರುವೈಭವೋತ್ಸವ ಕಣ್ತುಂಬಿಕೊಳ್ಳೋಕೆ ಭಕ್ತ ಕೋಟೆಯೇ ಶ್ರೀ ಮಠದಲ್ಲಿ ನೆಲೆಸಿತ್ತು. ರಾಯರ ಹುಟ್ಟು ಹಬ್ಬದ ಅಂಗವಾಗಿ ಬೆಳಗ್ಗೆ ೬-೩೦ ರಿಂದಲೇ ವೃಂದಾವನಕ್ಕೆ ವಿಶೇಷ ಪೂಜೆ, ತಿರುಪತಿಯಿಂದ ಶೇಷ ವಸ್ತ್ರ ತಂದು ಸಮರ್ಪಿಸಲಾಯ್ತು. ಇದೇ ವೇಳೆ ರಾಯರ ಮಠಕ್ಕೆ ಒಂದು ಕೆಜಿ ಬಂಗಾರ ಅಕ್ಷಯ ಪಾತ್ರೆ ಸಮರ್ಪಣೆ ಮಾಡಲಾಯ್ತು. ಈ ವೇಳೆ ನಾಡಿನಲ್ಲಿ ಸುಭೀಕ್ಚೆ, ಶಾಂತಿ ನೆಮ್ಮದಿ ನೆಲಸಲಿ ಎಂದು ರಾಯರಮಠದ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದ ಪೀಠಾದಿಪತಿ ಸುಭುದೇಂದ್ರ ತೀರ್ಥರು ಗುರು ರಾಯರ ವೈಭವೋತ್ಸವವನ್ನ ಕಣ್ತುಂಬಿಕೊಳ್ಳೋಕೆ ಎಂದು ಸಾವಿರಾರು ಜನ ಭಕ್ತ ಸಮೂಹಕ್ಕೆ ಆಶಿರ್ವಚನ ನೀಡಿ ಭಕ್ತಿಯಿಂದ ತಮ್ಮ ಇಷ್ಟಾರ್ಥಗಳನ್ನ ಪೂರೈಸಪ್ಪ ಗುರುವಾಯರಪ್ಪ ಅಂತ ಉರುಳು ಸೇವೆ, ಮಾಡಿ ಕೈಮುಗಿಯುತ್ತಿದ್ದ ದೃಶ್ಯಗಳು ನೆರೆದವರನ್ನ ಮಂತ್ರಮುಗ್ಧಗೊಳಿಸಿತ್ತು.. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಭಕ್ತರು ಗುರು ಸಾರ್ವಭೌಮರ ವೈಭವ ಕಂಡು ಪುಳಕಿತರಾದ್ರು.
ಇನ್ನು ಇಂದು ಗುರು ರಾಯರ ಗುರು ವೈಭವೋತ್ಸವದ ಕೊನೆಯ ದಿನ. ಆರು ದಿನಗಳ ಕಾಲ ನಡೆದ ಈ ಗುರುವೈಭವೋತ್ಸವ,
ಶ್ರೀ ರಾಘವೇಂದ್ರ ಸ್ವಾಮಿಗಳ ೪೨೩ ವರ್ದಂತೋತ್ಸವ ಹಾಗು ೩೯೭ ನೆಯ ಪಟ್ಟಾಭಿಷೇಕ ಮಹೋತ್ಸವದಲ್ಲಿ ಆರು ದಿನವೂ ವಿವಿಧ ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.. ಕೊನೆಯ ದಿನವಾದ ಇಂದು ಚೆನ್ನೈ ಹಾಗೂ ತಮಿಳುನಾಡು ಭಕ್ತರಿಂದ ನಾದಲಹರಿ ಕಾರ್ಯಕ್ರಮ ನೆರವೇರಿತು. ಸರಿ ಸುಮಾರು ೬೦೦ ಜನ ಸಂಗೀತಗಾರರಿಂದ ಏಕ ಕಾಲದಲ್ಲಿ ವಾಯಲಿನ್ ಸೇರಿದಂತೆ ವಿವಿಧ ಸಂಗೀತ ಕಾರ್ಯಕ್ರಮ ನೀಡಿದ್ರು.
ಒಟ್ಟಾರೆಯಾಗಿ ಆರು ದಿನಗಳ ಕಾಲ ತುಂಗಭದ್ರೆಯ ಒಡಲಲ್ಲಿರೋ ರಾಯರ ಮಠದಲ್ಲಿ ಈ ಗುರು ವೈಭವದ ಹಿನ್ನಲೆ ಭಕ್ತಿಯ ಸುಧೆ ಹರಿದದ್ದಂತೂ ಸತ್ಯ.