ನೋಟ್ ಬ್ಯಾನ್ ಹಾಗೂ ಜಿಎಸ್ ಟಿಯಿಂದಾಗಿ ಭಾರತದ ಆರ್ಥಿಕ ಪ್ರಗತಿ ಕುಂಠಿತಗೊಂಡಿದೆ: ಅಮೆರಿಕ ಅಧ್ಯಕ್ಷರ ಆರ್ಥಿಕ ವರದಿ

FILE - In this Feb. 27, 2017 file photo, President Donald Trump speaks in the Roosevelt Room of the White House in Washington. Trump is accusing former President Barack Obama of having Trump's telephones ``wire tapped’’ during last year's election, but Trump isn’t offering any evidence or saying what prompted the allegation. (AP Photo/Pablo Martinez Monsivais, File)

ವಾಷಿಂಗ್ಟನ್‌ :ಫೆ-22: ನೋಟ್ ಬ್ಯಾನ್ ಮತ್ತು ಜಿಎಸ್‌ಟಿ ಜಾರಿಯಿಂದಾಗಿ ಭಾರತದ ಆರ್ಥಿಕ ಪ್ರಗತಿ ಕುಂಠಿತಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ ಅಭಿಪ್ರಾಯಪಟ್ಟಿದೆ.

ಭಾರತ ಸೇರಿದಂತೆ ನಾಲ್ಕು ಪ್ರಮುಖ ದೇಶಗಳೊಂದಿಗಿನ ಅಮೆರಿಕದ ದ್ವಿಪಕ್ಷೀಯ ವಾಣಿಜ್ಯ ಕೊರತೆ ಹಿಂದಿನ ವರ್ಷದ ಅವಧಿಗೆ ಹೋಲಿಸಿದಾಗ 2017ರ ಮೊದಲ ಮೂರು ತ್ತೈಮಾಸಿಕದಲ್ಲಿ ಹೆಚ್ಚಿದೆ ಎಂದು ವಾಷಿಂಗ್ಟನ್‌ ಹೇಳಿದೆ.

1948ರಿಂದಲೂ ಗ್ಯಾಟ್‌ ಒಪ್ಪಂದಕ್ಕೆ ಸಹಿ ಹಾಕಿರುವ ಭಾರತ ಮತ್ತು ಬ್ರಝಿಲ್‌ ಸೇರಿದ ದೇಶಗಳು ತುಂಬಾ ಕಡಿಮೆ ರೀತಿಯಲ್ಲಿ ವಾಣಿಜ್ಯ ಮುಕ್ತವಾಗಿವೆ; ಉನ್ನತ ದರಗಳನ್ನು ಅವು ಕಾಯ್ದಕೊಂಡಿವೆ ಮತ್ತು ಸಾರ್ವತ್ರಿಕ ಬದ್ಧತೆಯನ್ನು ತಪ್ಪಿಸಿಕೊಂಡಿವೆ ಎಂದು ಅಮೆರಿಕ ಆರ್ಥಿಕ ವರದಿಯಲ್ಲಿ ಹೇಳಲಾಗಿದೆ. ಈ ವರದಿಯಲ್ಲಿ ಅಮೆರಿಕ ಆರ್ಥಿಕತೆಯ ಭವಿಷ್ಯ ಅತ್ಯುಜ್ವಲವಾಗಿರುವುದನ್ನು ಚಿತ್ರಿಸಲಾಗಿದೆ.

ಭಾರತದಲ್ಲಿ ಶೇ.90ರಷ್ಟು ವ್ಯಾಪಾರ ವಹಿವಾಟುಗಳು ನಗದಿನಲ್ಲಿ ನಡೆಯುತ್ತವೆ. 2016ರ ನವೆಂಬರ್‌ನಲ್ಲಿ ಭಾರತ ಸರಕಾರ ಕೈಗೊಂಡ 500 ಮತ್ತು 1,000 ರೂ. ನೋಟುಗಳ ಅಪನಗದೀಕರಣದಿಂದ ಶೇ.86ರಷ್ಟು ನಗದು ಚಲಾವಣೆಯಿಂದ ಅಮಾನ್ಯಗೊಂಡವು; ಇದರಿಂದಾಗಿ ದೇಶದ ಆರ್ಥಿಕತೆಗೆ ತೀವ್ರವಾದ ಹೊಡೆತ ಬಿತ್ತು. ಅನಂತರದಲ್ಲಿ ಜಾರಿಯಾದ ಜಿಎಸ್‌ಟಿಯಿಂದಾಗಿಯೂ ಆರ್ಥಿಕ ಪ್ರಗತಿ ಕುಂಠಿತಗೊಂಡಿತು ಎಂದು ಅಮೆರಿಕ ಅಧ್ಯಕ್ಷರ ಆರ್ಥಿಕ ವರದಿ ಹೇಳಿದೆ.

India’s growth slowed due,demonetisation,GST, Donald Trump administration

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ