ಮುಂಬೈ, ಏ.12- ವೇಶ್ಯಾವಾಟಿಕೆ ನಡೆಯುತ್ತಿದ್ದ ಕಟ್ಟಡದ ಮೇಲೆ ಪೆÇಲೀಸರು ನಡೆಸಿದ ದಾಳಿ ವೇಳೆ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಇಬ್ಬರು ಲೈಂಗಿಕ ಕಾರ್ಯಕರ್ತರು ಮೃತಪಟ್ಟ ಘಟನೆ ದಕ್ಷಿಣ ಮುಂಬೈನಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ.
ಗ್ರಾಂಟ್ ರಸ್ತೆಯ ಡಿ.ಎಂ.ಮಾರ್ಗ್ ಬಡಾವಣೆಯಲ್ಲಿನ ಓಂ ಬಿಲ್ಡಿಂಗ್ನಲ್ಲಿ ರಾತ್ರಿ 10.30ರಲ್ಲಿ ಈ ಘಟನೆ ನಡೆದಿದೆ ಎಂದು ಪೆÇಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವೇಶ್ಯಾವಾಟಿಕೆಗೆ ಕುಪ್ರಸಿದ್ಧವಾಗಿರುವ ಈ ಪ್ರದೇಶದಲ್ಲಿ ಡಿ.ಎಂ.ಮಾರ್ಗ್ ಠಾಣೆಯ ಪೆÇಲೀಸರು ಗಸ್ತಿನಲ್ಲಿದ್ದರು. ಈ ಸಂದರ್ಭದಲ್ಲಿ ಓಂ ಬಿಲ್ಡಿಂಗ್ನಲ್ಲಿ ದಾಳಿ ಮಾಡಿದಾಗ ಕೆಳ ಅಂತಸ್ತಿನಲ್ಲಿದ್ದವರು ಮೂರನೇ ಮಹಡಿಯಲ್ಲಿ ದಂಧೆಯಲ್ಲಿ ತೊಡಗಿದ್ದವರನ್ನು ಎಚ್ಚರಿಸಿದರು. ಇದರಿಂದ ಭಯಭೀತರಾದ ಇಬ್ಬರು ಮಹಿಳೆಯರು ಕಿಟಕಿಗೆ ಹಗ್ಗ ಕಟ್ಟಿ ಕೆಳಗೆ ಇಳಿಯುತ್ತಿದ್ದಾಗ ಆಯತಪ್ಪಿ ಬಿದ್ದರು. ತೀವ್ರ ಗಾಯಗೊಂಡ ಅವರಿಬ್ಬರು ಜೈಕುಲಾದಲ್ಲಿನ ಜೆಜೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇವರ ಪಶ್ವಿಮ ಬಂಗಾಳದ ಮೂಲದವರು. ಇವರಲ್ಲಿ ಒಬ್ಬಾಕೆ 50 ವರ್ಷದ ಮಹಿಳೆ. ಡಿ.ಬಿ.ಮಾರ್ಗ್ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.