ಚುನಾವಣಾ ಬಂದೋಬಸ್ತ್‍ಗಾಗಿ ನಗರಕ್ಕೆ ಆಗಮಿಸಿದ 11 ಕಂಪೆನಿ ಕೇಂದ್ರ ಪಡೆಗಳು

ಬೆಂಗಳೂರು, ಏ.12- ಚುನಾವಣಾ ಬಂದೋಬಸ್ತ್‍ಗಾಗಿ ಬೆಂಗಳೂರು ನಗರಕ್ಕೆ 11 ಕಂಪೆನಿ ಕೇಂದ್ರ ಪಡೆಗಳು ಆಗಮಿಸಿವೆ.

ಸಿಐಎಸ್‍ಎಫ್, ಐಟಿಬಿಪಿ, ಬಿಎಸ್‍ಎಫ್, ಆರ್‍ಎಎಫ್ ಮತ್ತು ಎಸ್‍ಎಸ್‍ಬಿ ಕಂಪೆನಿಗಳು ಆಗಮಿಸಿದ್ದು, ಇವುಗಳನ್ನು ಎಂಟು ವಿಭಾಗಗಳಿಗೆ ನಿಯೋಜಿಸಲಾಗಿದೆ.
ಸ್ಥಳೀಯ ಪೆÇಲೀಸರ ಜತೆಗೆ ಈ ಕಂಪೆನಿಗಳು ನಿಯೋಜನೆಗೊಳ್ಳಲಿದ್ದು, ಶಾಂತಿಯುತ ಚುನಾವಣೆಗಾಗಿ ಬಂದೋಬಸ್ತ್ ಮಾಡಲಾಗಿದ್ದು, ಇನ್ನಷ್ಟು ಕೇಂದ್ರ ಪಡೆಗಳು ನಗರಕ್ಕೆ ಆಗಮಿಸಲಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ